ಬಹರೈನ್‌ನಲ್ಲಿ ಶನೀಶ್ವರ ಮಹಾತ್ಮೆ ಯಕ್ಷಗಾನ

mng-26june-kannada sangaddddddddd
Published on



ಮಂಗಳೂರು : ಕನ್ನಡ ಸಂಘ ಬಹರೈನ್ ಇದರ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತ ಶ್ರೀ ಶನಿಪೂಜೆ
ಬಹರೈನ್‌ನಲ್ಲಿರುವ ಸಂಘದ ಸಭಾಂಗಣದಲ್ಲಿ ಕದ್ರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ನೆರವೇರಿತು.
ಇದೇ ಸಂದರ್ಭದಲ್ಲಿ ಅತಿಥಿ ಕಲಾವಿದರು ಹಾಗೂ ಸಂಘದ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಜರುಗಿತು.
ಅತಿಥಿ ಕಲಾವಿದರಾಗಿ ಕದ್ರಿ ನವನೀತ ಶೆಟ್ಟಿ , ವಿಜಯ ಕುಮಾರ್ ಶೆಟ್ಟಿ ಮೊಯ್ಲಟ್ಟು, ಭಾಗವತರಾಗಿ ರೋಶನ್.ಎಸ್.ಕೋಟ್ಯಾನ್
ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕರಾದ ಕರುಣಾಕರ ಶೆಟ್ಟಿ ಅಂಪಾರು, ಮನೋಜ್ ಆಳ್ವ , ಬಹರೈನ್ ಕನ್ನಡ ಸಂಘದ
ಅಧ್ಯಕ್ಷ ಅಮರನಾಥ್ ರೈ , ಉಪಾಧ್ಯಕ್ಷ ಮಹೇಶ್ ಕುಮಾರ್ ಕಲಾವಿದರನ್ನು ಗೌರವಿಸಿದರು. ಕನ್ನಡ ಭವನದ ಯಕ್ಷಗಾನ ಕೇಂದ್ರದ ದಾನಿ ನವೀನ್ ಶೆಟ್ಟಿ , ಅನ್ನದಾನ ಸೇವಾಕರ್ತ ಸುಭಾಶ್ಚಂದ್ರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net