

ಕೋಟ: ಕೋಟದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಸಭಾಂಗಣದಲ್ಲಿ ಶ್ರಾವಣ ಮಾಸದ ವಿಶೇಷತೆ ಭಾಗವಾಗಿ ಸೌರಭ ಸಪ್ತಮಿ ಶೀರ್ಷಿಕೆಯಡಿ ಆ.25ರಿಂದ 31ರ ತನಕ ಯಕ್ಷಗಾನ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ..
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕೀರ್ತಿಶೇಷ ಹಂದಾಡಿ ಬಾಲಕೃಷ್ಣ ನಾಯಕ್ ಸಂಸ್ಮರಣೆ ಹಾಗೂ ನುಡಿನಮನ ನಡೆಯಲಿದೆ.
ಯಕ್ಷಸೌರಭ ಕಲಾರಂಗದ ಅಧ್ಯಕ್ಷ ರಾಘವೇಂದ್ರ ಕರ್ಕೇರ ನೇತೃತ್ವದಲ್ಲಿ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾರ್ಗದರ್ಶನದಲ್ಲಿ ಉದ್ಯಮಿಗಳ ಸಹಕಾರದೊಂದಿಗೆ ಆ.25ರಂದು ಸಂಜೆ 6ರಿಂದ ಚಿತ್ರಸೇನಾ ಕಾಳಗ, 26ರಂದು ಸಂಜೆ 6ಕ್ಕೆ ಮೈಂದ ದ್ವಿವಿದ ಕಾಳಗ, 27ರಂದು ಮೀರಮಣಿ ಕಾಳಗ, 28ರಂದು ಚಂದ್ರಹಾ ಚರಿತ್ರೆ, 29ರಂದು ಶಶಿ ಪ್ರಭಾ ಪರಿಣಯ, 30ಕ್ಕೆ ಸೈಂಧವ ವಧೆ, 31ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಭಾಗವಹಿಸಲಿದ್ದಾರೆ. ಲವಕುಶ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಕರ್ಕೇರ ತಿಳಿಸಿದ್ದಾರೆ.