ಯಕ್ಷ ಭಾರತಿ ಆಮಂತ್ರಣ ಬಿಡುಗಡೆ

Bel_Yaksha Bharathi
Published on

ಬೆಳ್ತಂಗಡಿ: ಕನ್ಯಾಡಿ ಯಕ್ಷಭಾರತಿಯ ದಶಮಾನೋತ್ಸವ ಸಮಾರಂಭವು ಫೆ.8ರಂದು ಉಜಿರೆಯ ಶ್ರೀರಾಮಕೃಷ್ಣ ಸಭಾಂಗಣದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತಾಯ ಉಜಿರೆ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಟ್ರಸ್ಟಿಗಳಾದ ಹರೀಶ್ ರಾವ್ ಮುಂಡ್ರುಪ್ಪಾಡಿ, ಕುಸುಮಾಕರ ಕುತ್ತೋಡಿ, ಭವ್ಯಹೊಳ್ಳ ಉಜಿರೆ, ಸಂಚಾಲಕ ಮಹೇಶ ಕನ್ಯಾಡಿ, ಸುದರ್ಶನ್ ಕೆ.ವಿ.ಕನ್ಯಾಡಿ, ಶ್ರೀನಿವಾಸ ರಾವ್ ಕಲ್ಮಂಜ, ಪುಷ್ಪ ಆರ್.ಶೆಟ್ಟಿ ಉಜಿರೆ, ವೇದವತಿ ಕನ್ಯಾಡಿ, ಚಂದ್ರಾವತಿ ನಾರ್ಯ, ವೀಣಾ ಧರ್ಮಸ್ಥಳ, ನಮನ್ ಧರ್ಮಸ್ಥಳ, ಪ್ರತೀಕ್ಷಾ ಕನ್ಯಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net