ಯಜ್ಞಾಶ್ರಮ ಮಠದ ಉತ್ಸವಕ್ಕೆ ಚಾಲನೆ

Mul_festival
Published on

ಮೂಲ್ಕಿ: ಕೆ.ಎಸ್.ರಾವ್ ನಗರ ಲಿಂಗಪ್ಪಯ್ಯ ಕಾಡು ಶ್ರೀ ನಿಂದರಕಿ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಧರ್ಮ ಸಂಸ್ಥಾ ಯಜ್ಞಾಶ್ರಮ ಮಠದ 39ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಧಾರವಾಡ ಕೆಲಗೇರಿ ಸಿದ್ಧ ಸುಕ್ಷೇತ್ರದ ಮಠದ ಉತ್ತರಾಧಿಕಾರಿ ಶ್ರೀ ಗುರು ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು.

ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಗುರುಗಳ ಬೆಳ್ಳಿಯ ಮೂರ್ತಿ ಸಹಿತ ಮೂಲ್ಕಿ ಶಾಂಭವಿ ನದಿಯಲ್ಲಿ ಗಂಗಾ ಸ್ನಾನಗೈದು ಪಲ್ಲಕ್ಕಿ ಮೂಲಕ ಮೆರವಣಿಗೆಯಲ್ಲಿ ಮಠಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಕ್ಷೇತ್ರದ ಅರ್ಚಕರಾದ ಬಸವರಾಜ ಹಂಗರಗಿ ಮತ್ತು ಪರತ್ತ ಗೌಡ ಯಳವತ್ತಿ ಪೌರೋಹಿತ್ಯದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕತೃಗದ್ದುಗೆಗೆ, ಪರಮಗುರು ವೀರೇಶ್ವರ ಲಿಂಗಕ್ಕೆ ಹವನ, ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.

ಅಧ್ಯಕ್ಷ ಮಂಜುನಾಥ ಆರ್.ಕೆ., ಪದಾಧಿಕಾರಿಗಳಾದ ವಿಠಲ್ ಎನ್.ಎಂ., ಭೀಮಾಶಂಕರ್ ಆರ್.ಕೆ., ರಮೇಶ್ ಹಂಗರಗಿ, ಶಿವಾನಂದ ಆರ್.ಕೆ.ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net