ಶವೋಮಿಯಿಂದ ಮತ್ತೊಂದು ಅತ್ಯಾಧುನಿಕ ಸ್ಮಾರ್ಟ್​ಫೋನ್​ ಬಿಡುಗಡೆ: ಮಾರುಕಟ್ಟೆಯಲ್ಲಿ ಸಂಚಲನ

mix fold 3 xiaomi
ಸಾಂದರ್ಭಿಕ ಚಿತ್ರ
Published on

ದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶವೋಮಿ ಕೆಲವು ಸಮಯದಿಂದ ಮಡಚಬಹುದಾದ ಫೋನ್​ಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಕಂಪನಿಯು ಅಧಿಕೃತವಾಗಿ ತನ್ನ ಹೊಸ ಶವೋಮಿ ಮಿಕ್ಸ್ ಫೋಲ್ಡ್ 3ನ್ನು ಬಿಡುಗಡೆ ಮಾಡಿದೆ. ಸ್ಯಾಮ್​ಸಂಗ್​ ಗ್ಯಾಲಾಕ್ಸಿ ಝೆಡ್​ ಫೋಲ್ಡ್​​ 4 ಮತ್ತು ಗೂಗಲ್​ ಪಿಕ್ಸಲ್​ ಪೋಲ್ಡ್​​ನ್ನು ಹೋಲುವ ಈ ಫೋನ್​, ನೋಟ್‌ಬುಕ್ ತರಹದ ಫೋಲ್ಡಿಂಗ್ ವಿನ್ಯಾಸವನ್ನು ಒಳಗೊಂಡಿದೆ.

ಶವೋಮಿ ಮಿಕ್ಸ್​​ ಫೋಲ್ಡ್​​ ಮೊಬೈಲ್​ನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿದ್ದು, ಇದು 8.02-ಇಂಚಿನ ಪ್ರೈಮರಿ ಡಿಸ್​ಪ್ಲೇಯನ್ನು ಹಾಗೂ 6.56-ಇಂಚಿನ ಸೆಕಂಡ್​​ರಿ ಡಿಸ್​ಪ್ಲೇಯನ್ನು ಹೊಂದಿದೆ. ಶವೋಮಿ ಮಿಕ್ಸ್​​ ಫೋಲ್ಡ್​​ 3 ಸ್ಮಾರ್ಟ್​ಫೋನ್​ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಆಂಡ್ರಾಯ್ಡ್ 14 ಆಪರೇಟಿಂಗ್​ ಸಿಸ್ಟಮ್​ನ್ನು ಹೊಂದಿದೆ. ಇದು 12GB RAM +256 GB ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು, 4500mAh ಬ್ಯಾಟರಿಯನ್ನು ಒಳಗೊಂಡಿದೆ.

ಶವೋಮಿ ಮಿಕ್ಸ್​​ ಫೋಲ್ಡ್​​ 3ನ ಬೆಲೆ 12GB RAM + 256GB ಸ್ಟೋರೇಜ್ ಮಾದರಿಗೆ ಸುಮಾರು ರೂ 1,03,000, ಮಧ್ಯ ಶ್ರೇಣಿಯ 16GB RAM ಮತ್ತು 512GB ಸಂಗ್ರಹಣೆಯ ಆಯ್ಕೆಯು ಮಾದರಿಗೆ ಸುಮಾರು ರೂ 1,14,500 ಮತ್ತು 16GB RAM ಮತ್ತು 1TB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಮಾಡೆಲ್​ಗೆ ಸುಮಾರು ರೂ 1,26,600 ಬೆಲೆಯಿರಲಿದೆ ಎಂದು ಅಂದಾಜಿಲಾಗಿದೆ.

ಈ ಫೋನ್​ ಹಿಂಭಾಗದಲ್ಲಿ ನಾಲ್ಕು ಕ್ಯಾಮರಾಗಳನ್ನು ಒಳಗೊಂಡಿದೆ. ಹಿಂಭಾಗವು 50-ಮೆಗಾಪಿಕ್ಸೆಲ್ ಸೋನಿ IMX 800 ಪ್ರಾಥಮಿಕ ಕ್ಯಾಮರಾ, 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 10-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು ಇನ್ನೊಂದು 10-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್​​ನ್ನು ಒಳಗೊಂಡಿದೆ. ಸೆಲ್ಫಿಗಾಗಿ 20-ಮೆಗಾಪಿಕ್ಸೆಲ್ ಕ್ಯಾಮರಾವನ್ನು ಒಳಗೊಂಡಿದೆ.

ಇದನ್ನು ಮೂನ್ ಶ್ಯಾಡೋ ಬ್ಲಾಕ್ ಮತ್ತು ಸ್ಟಾರ್ ಗೋಲ್ಡ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್​​ನ್ನು ಬೆಂಬಲಿಸುವ ಈ ಫೋನ್​ USB Type-C ಹೊಂದಿದ್ದು 5Gಯನ್ನು ಬೆಂಬಲಿಸುತ್ತದೆ. ಅಲ್ಲದೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ದಿಕ್ಸೂಚಿ/ಮ್ಯಾಗ್ನೆಟೋಮೀಟರ್ ಸೆನ್ಸಾರ್​ಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್​ಸೈಟ್​ ಪರಿಶೀಲಿಸುವುದು ಉತ್ತಮವಾಗಿದ್ದು, ಕೆಲ ಪೀಚರ್ಸ್​ಗಳು ಅದಲು ಬದಲಾಗಿಯೂ ಇರಬಹುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net