

ಗುಳೇದಗುಡ್ಡ: ಮನುಷ್ಯ ಭಕ್ತಿಯಿಂದ ದೇವರನ್ನು ನಿತ್ಯ ಪೂಜಿಸಬೇಕು. ನಮ್ಮಲ್ಲಿರುವ ಕೆಟ್ಟ ಮನಸ್ಥಿತಿಗಳನ್ನು ತೊರೆದು ದೇವರನ್ನು ಭಕ್ತಿ ಭಾವದಿಂದ ಆರಾಧಿಸಬೇಕು. ಇದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಸಬ್ಬಲಹುಣಸಿ ಗ್ರಾಮದ ಶ್ರೀ ಮಾರುತೇಶ್ವರ ಸದ್ಭಕ್ತ ಮಂಡಳಿಯವರು ಶನಿವಾರ ಹಮ್ಮಿಕೊಂಡಿದ್ದ ನೂತನ ಮಾರುತೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಗಳಲ್ಲಿ ದೇವಸ್ಥಾನಗಳು ಇರುವುದರಿಂದ ಗ್ರಾಮ ಸುರಕ್ಷಿತವಾಗಿರುತ್ತದೆ.
ದಾನಿಗಳ ಸಹಾಯ ಹಾಗೂ ಪೂಜ್ಯರ ಆಶೀರ್ವಾದದಿಂದ ಇಂತಹ ದೇವಸ್ಥಾನಗಳು ನಿರ್ಮಾಣವಾಗುತ್ತವೆ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಗ್ರಾಮಗಳಲ್ಲಿ ಧಾರ್ಮಿಕ ಚಟುವಟಿಕೆ ನಿರಂತರ ನಡೆಯಲಿ. ಗ್ರಾಮದ ಅಭಿವೃದ್ಧಿಗೆ ಯಾವುದೇ ಕೆಲಸ ಕಾರ್ಯವಿದ್ದರೂ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಲೋಡ್ಶೆಡ್ಡಿಂಗ್ ಸರಿಪಡಿಸಲು ಒತ್ತಾಯಿಸಿ ರಸ್ತೆ ತಡೆ
ಬೆಳಗ್ಗೆ ಸಿಕ್ಕೇರಿಯಿಂದ ಸಕಲ ವಾದ್ಯಗಳೊಂದಿಗೆ ಮಾರುತೇಶ್ವರ ಮೂರ್ತಿಯನ್ನು ಗ್ರಾಮಕ್ಕೆ ತರಲಾಯಿತು. ಬಳಿಕ ರುದ್ರಾಭಿಷೇಕ, ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮಿಗಳು, ಹಂಸನೂರಿನ ಬಸವರಾಜೇಂದ್ರ ಸ್ವಾಮಿಗಳು, ಸಬ್ಬಲಹುಣಸಿಯ ಕಾಂತವೀರ ಸ್ವಾಮಿಗಳು, ಬಸವರಾಜ ಸಾರಂಗಮಠ, ಬಸವಂತಪ್ಪ ಬಡಿಗೇರ, ದೇವಾನಂದ ಬನ್ನಿ ಶಾಸಿಗಳು ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.
ಗ್ರಾ.ಪಂ. ಅಧ್ಯಕ್ಷ ರಾಮಣ್ಣ ವಾಲೀಕಾರ, ಉಪಾಧ್ಯಕ್ಷ ಯಲ್ಲಪ್ಪ ಹಿರಿಯಾಳ, ಸಿ.ಬಿ.ಹಿರೇಕುರುಬರ, ಪಕೀರಪ್ಪ ತಳವಾರ, ಹನುಮಂತ ವೈದ್ಯ, ಚನ್ನಪ್ಪ ಗೌಡರ, ಆಸಂಗೆಪ್ಪ ಬಂಡಿವಡ್ಡರ, ಗೋಪಾಲ ಜಕ್ಕಪ್ಪನವರ, ಭೀಮನಗೌಡ ಗೌಡರ, ಹನುಮಪ್ಪ ನಡಶೇಸಿ, ಭೀಮಪ್ಪ ನಡಶೇಸಿ, ಸಂಗಪ್ಪ ಶಿರಹಟ್ಟಿ ಇತರರು ಇದ್ದರು.