31 ರಿಂದ ಆರಾಧನೆ ಮಹೋತ್ಸವ

Worship Festival from 31st
ರಾಘವೇಂದ್ರ ಸ್ವಾಮಿಗಳು.
Published on

ಇಳಕಲ್ಲ(ಗ್ರಾ): ಇಲ್ಲಿನ ಕೂಡಲಸಂಗಮ ಕಾಲನಿಯಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.31ರಿಂದ ಮೂರು ದಿನ ಆರಾಧನೆ ನಡೆಯಲಿದೆ.

ಆ. 31 ರಂದು ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ಅಭಿಷೇಕ ಮಹಾಪೂಜೆ, ಅಷ್ಟೋತ್ತರ, ಪಂಚಾಮೃತ, ಮಧ್ಯಾಹ್ನ ಉಪನ್ಯಾಸ, ಸಂಜೆ ಭಜನೆ ಮತ್ತು ಪಲ್ಲಕ್ಕಿ ಸೇವೆ ನಡೆಯಲಿದೆ.

ಸೆ. 1ರಂದು ಮಧ್ಯಾರಾಧನೆ, ಸೆ. 2 ರಂದು ಉತ್ತರಾರಾಧನೆ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. 10 ಗಂಟೆಗೆ ರಥೋತ್ಸವ, ನಂತರ ಅನ್ನಪ್ರಸಾದ ಏರ್ಪಡಿಸಲಾಗಿದೆ ಎಂದು ಅರ್ಚಕ ಶೆಡ್ಲಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net