ಚಾಂಪಿಯನ್ಸ್ ಟ್ರೋಫಿಗೆ ಕಮ್ಮಿನ್ಸ್ ಡೌಟ್!: ಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಸ್ಮಿತ್ ನಾಯಕ

New Project (2)
Published on

ಸಿಡ್ನಿ: ಪಾದದ ಸ್ನಾಯುಸೆಳೆತದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿದೆ. ಈಗಾಗಲೆ ಪಿತೃತ್ವದ ರಜೆಯಿಂದಾಗಿ ಜ.29ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ಭಾರತ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿ ವೇಳೆಯಲ್ಲಿ ಕಮ್ಮಿನ್ಸ್‌ಗೆ ಪಾದದ ಸ್ನಾಯು ಸೆಳೆತದ ಸಮಸ್ಯೆ ಕಾಣಿಸಿಕೊಂಡಿತು ಎನ್ನಲಾಗಿದೆ.

ಸ್ನಾಯು ಸೆಳೆತದ ಗಂಭೀರತೆಗಾಗಿ ಸ್ಕಾೃನಿಂಗ್‌ಗೆ ಒಳಗಾಗಲಿರುವ ಕಮ್ಮಿನ್ಸ್, ೆ.19ರ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗುವ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಖಾತ್ರಿಪಡಿಸಲು ಹಿಂದೇಟು ಹಾಕಿದ್ದಾರೆ. ಇದು ಐಸಿಸಿ ಟೂರ್ನಿಗೆ ಕಮ್ಮಿನ್ಸ್ ಲಭ್ಯತೆಯ ಅನುಮಾನ ಹುಟ್ಟುಹಾಕಿದೆ.

ಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಸ್ಮಿತ್ ನಾಯಕ

ಸಿಡ್ನಿ: ಕಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಗೈರಿನಲ್ಲಿ ಅನುಭವಿ ಸ್ಟೀವನ್ ಸ್ಮಿತ್ ಲಂಕಾ ಪ್ರವಾಸದಲ್ಲಿ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ವಿರುದ್ಧ ಕಣಕ್ಕಿಳಿದಿದ್ದ ಆಸೀಸ್ ತಂಡದ ಬಹುತೇಕ ಆಟಗಾರರು ಲಂಕಾ ವಿರುದ್ಧದ ಸರಣಿಗೂ ಸ್ಥಾನ ಪಡೆದಿದ್ದಾರೆ. ಮೂವರು ವೇಗಿಗಳ ಜತೆಗೆ ಮೂವರು ಸ್ಪಿನ್ನರ್‌ಗಳಿಗೆ ಮಣೆ ಹಾಕಲಾಗಿದೆ.

21 ವರ್ಷದ ಆಲ್ರೌಂಡರ್ ಕೂಪರ್ ಕೊನೆಲಿ ಹೊಸಮುಖ ಎನಿಸಿದರೆ, ಮೆಕ್‌ಸ್ವೀನಿ ತಂಡಕ್ಕೆ ಮರಳಿದ್ದಾರೆ. ತಂಡ: ಸ್ಟೀವನ್ ಸ್ಮಿತ್ (ನಾಯಕ), ಉಸ್ಮಾನ್ ಖವಾಜ, ಸ್ಯಾಮ್ ಕಾನ್‌ಸ್ಟಾಸ್, ಮಾರ್ನಸ್ ಲಬುಶೇನ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ನಾಥನ್ ಮೆಕ್‌ಸ್ವೀನಿ, ಬೆಯು ವೆಬ್‌ಸ್ಟರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಸೀನ್ ಅಬೋಟ್, ನಾಥನ್ ಲ್ಯಾನ್, ಟಾಡ್ ಮರ್ಫಿ, ಮ್ಯಾಟ್ ಕುಹ್ನೆಮನ್, ಕೂಪರ್ ಕೊನೆಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net