World Weightlifting Championships: ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು

World Weightlifting Championships
Published on

World Weightlifting Championships : ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದರು. ಭಾರತದ ಸ್ಟಾರ್ ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 2025 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಮೀರಾಬಾಯಿ ಚಾನು ಮೂರು ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಕಣಕ್ಕಿಳಿದ್ದ ಅವರು ಪದಕದೊಂದಿಗೆ ಕಮ್‌ಬ್ಯಾಕ್‌ ಮಾಡಿದರು. ಉತ್ತರ ಕೊರಿಯಾದ ರಿ ಸಾಂಗ್ ಗಮ್ ವಿಶ್ವ ದಾಖಲೆಯ ಪ್ರದರ್ಶನದೊಂದಿಗೆ ಚಿನ್ನ ಗೆದ್ದರೆ, ಥೈಲ್ಯಾಂಡ್‌ನ ಥಾನ್ಯಾಥಾನ್ ಸುಖರೋಯೆನ್ ಕಂಚಿನ ಪದಕ ಗೆದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಚಾನು ಸ್ನ್ಯಾಚ್ ವಿಭಾಗದಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ 84 ಕೆಜಿ ಎತ್ತುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಕೊರಿಯಾದ ರಿ ಸಾಂಗ್-ಗಮ್ ಒಟ್ಟು 213 ಕೆಜಿ (91 ಕೆಜಿ + 122 ಕೆಜಿ) ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಅವರು 122 ಕೆಜಿಯ ಹೊಸ ವಿಶ್ವ ದಾಖಲೆಯನ್ನು ಸಹ ಸ್ಥಾಪಿಸಿದರು. ಥೈಲ್ಯಾಂಡ್‌ನ ಥಾನ್ಯಥಾನ್ ಸುಕ್ಚರೋಯೆನ್ 198 ಕೆಜಿ (88 ಕೆಜಿ + 110 ಕೆಜಿ) ಎತ್ತುವ ಮೂಲಕ ಕಂಚಿನ ಪದಕ ಗೆದ್ದರು.

೨೦೨೪ ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಪದಕ ಗೆಲ್ಲುವಲ್ಲಿ ವಿಫಲರಾದರು, ನಾಲ್ಕನೇ ಸ್ಥಾನ ಪಡೆದರು. ಇದರ ನಂತರ, ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡದಲ್ಲಿದ್ದರು. ನಂತರ ಅವರು ಬಲವಾದ ಪ್ರದರ್ಶನದೊಂದಿಗೆ ಎರಡನೇ ಸ್ಥಾನವನ್ನು ಗಳಿಸಿದರು. ಸ್ನ್ಯಾಚ್ ವಿಭಾಗದಲ್ಲಿ ಮೀರಾಬಾಯಿ ಒಟ್ಟು ೮೪ ಕಿಲೋಗ್ರಾಂಗಳಷ್ಟು ಭಾರ ಎತ್ತಿದರು. ನಂತರ ಅವರು ಕ್ಲೀನ್ ಮತ್ತು ಜರ್ಕ್‌ನಲ್ಲಿ ೧೧೫ ಕಿಲೋಗ್ರಾಂಗಳಷ್ಟು ಭಾರ ಎತ್ತಿದರು, ಒಟ್ಟು ೧೯೯ ಕಿಲೋಗ್ರಾಂಗಳಷ್ಟು ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಅವರ ಮೂರನೇ ಪದಕ ಇದು. ಈ ಹಿಂದೆ ಅವರು 2017 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಮತ್ತು 2022 ರಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net