ಶ್ರೀನಿವಾಸ ರಾವ್ ಕೆ. ಅಭಿಮತ
ವಿಶ್ವ ಜಲ-ವಾತಾವರಣ ದಿನಾಚರಣೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಭೂಮಂಡಲದಲ್ಲಿ ಶೇ. 72 ಭಾಗದಲ್ಲಿ ನೀರು ಆವರಿಸಿಕೊಂಡಿದೆ. ಆದರೆ, ಶೇ. 3ರಷ್ಟು ಮಾತ್ರ ನೀರು ಕುಡಿಯಲು ಯೋಗ್ಯವಾಗಿದೆ. ಬಹುಪಾಲು ನೀರು ಸಮುದ್ರದಲ್ಲಿದ್ದರೂ ಅವು ಉಪ್ಪಾಗಿದ್ದರಿಂದ ಕುಡಿಯಲು ಬರುವುದಿಲ್ಲ. ಹೀಗಾಗಿ ಅನಗತ್ಯವಾಗಿ ನೀರು ಪೋಲು ಮಾಡಿದರೆ ಮುಂದೆ ನಾವುಗಳೇ ಕಣ್ಣೀರು ಹಾಕಬೇಕಾಗುತ್ತದೆ ಎಂದು ಸಮಾನ ಮನಸ್ಕ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ವೇದಿಕೆಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಜಲದಿನ ಹಾಗೂ ವಿಶ್ವ ವಾತಾವರಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಣಿ ಸಂಕುಲಕ್ಕೆ ಸಂಕಷ್ಟ
ಕೆರೆ, ಬಾವಿಗಳನ್ನೆಲ್ಲ ಮುಚ್ಚಿ ನಾವುಗಳೇ ಕಾಂಕ್ರೀಟ್ ಕಾಡು ಬೆಳೆಸುತ್ತಿದ್ದೇವೆ. ಜಲ-ವಾಯು ಮಾಲಿನ್ಯದಿಂದ ಪ್ರಾಣಿಸಂಕುಲ ಸಂಕಷ್ಟಕ್ಕೆ ಒಳಗಾಗಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ಬಲಿ ತೆಗೆದುಕೊಳ್ಳುತ್ತಿದ್ದಾನೆ. ಈಗಲೇ ನಾವು ಎಚ್ಚರ ವಹಿಸದಿದ್ದರೆ ಮುಂದಿನ ಜನಾಂಗ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವೇದಿಕೆಯ ಪ್ರಮುಖರಾದ ಸಿಂಧು ಡಿ., ಗುತ್ತಿಗೆದಾರ ರಮಾನಂದ ಮಾತನಾಡಿದರು.
ಲಕ್ಷ್ಮೀ, ವಿಜಯಲಕ್ಷ್ಮೀ, ಶಶಿಕಲಾ, ಅನುರಾಧಾ, ಚೈತ್ರಾ, ಸುಮಲತಾ, ಶ್ರೀದೇವಿ, ಭಾರತಿ, ಹೇಮಲತಾ, ಶಿವಾನಿ ಎಸ್., ಕೃಷ್ಣ ಕೆ., ಪ್ರಮೋದ, ಜಗದೀಶ, ರಮೇಶ, ಗೋಪಾಲ ಕೆ., ರಾಘವೇಂದ್ರ, ಅಶೋಕ, ಚಂದ್ರಶೇಖರ, ಪ್ರತಿಭಾ ಇತರರು ಉಪಸ್ಥಿತರಿದ್ದರು.