ಪ್ರವಾಸೋದ್ಯಮ ದಿನದ ಅಂಗವಾಗಿ ವಿವಿಧ ಸ್ಪರ್ಧೆಗಳು

tourism-day-spots
Published on

ಕಾರವಾರ: ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಸಂಘಟನೆಗಳ ಪ್ರಾಯೋಜಕತ್ವದಲ್ಲಿ ಬೆಳಗಿನಿಂದ ಸಾಯಂಕಾಲದವರೆಗೆ ಸ್ಪರ್ಧೆಗಳು ನಡೆದವು. ಜಿಲ್ಲೆಯ ವಿವಿಧೆಡೆಗಳಿಂದ ಪ್ರವಾಸೋದ್ಯಮ ಸಂಸ್ಥೆಯ ತಂಡಗಳು ಭಾಗವಹಿಸಿದ್ದವು.

ಪುರುಷರಿಗಾಗಿ ನಡೆದ ಹಗ್ಗ ಜಗ್ಗಾಟದಲ್ಲಿ ಚಿತ್ತಾಕುಲಾ ಜೈ ಮಾರುತಿ ತಂಡ, ವೇವ್ ಅಡ್ವೆಂಚರ್ ತಂಡಗಳು ಮೊದಲ ಎರಡು ಸ್ಥಾನಗಳನ್ನು ಪಡೆದವು. ಮಹಿಳೆಯರಿಗಾಗಿ ನಡೆದ ಸ್ಪರ್ಧೆಯಲ್ಲಿ ರಿಲಾಯನ್ಸ್ ಲೈಫ್ ಇನ್ಶುರೆನ್ಸ್ ತಂಡ, ಸ್ಪೂರ್ತಿ ಸಂಜೀವಿನಿ ತಂಡ ಹಾಗೂ ಮರೈನ್ ದಿವಾಸ್ ಗ್ರೂಪ್‌ಗಳು ಮೊದಲ ಮೂರು ಸ್ಥಾನ ಪಡೆದವು. ಗೋಣಿಚೀಲ ಓಡಟಲ್ಲಿ ಮೊಹಮದ್, ಪ್ರಮೋದ ನಾಯ್ಕ, ಸೌಮ್ಯ ಹೊಸಮನಿ, ಸಾವಿತ್ರಿ ನಾಯ್ಕ, ಲಿಂಬೆಹಣ್ಣು ಓಟದಲ್ಲಿ ಸತೀಶ ದುರ್ಗಪ್ಪನವರ್, ಉಮೇಶ ನಾಗರಾಜ ಬೆಳಗಾಂವಕರ್, ಸೌಮ್ಯ ಹೊಸಮನಿ, ಚೆನ್ನಮ್ಮ ಗಸ್ತಿ, ಮರಳು ಶಿಲ್ಪದಲ್ಲಿ ಜಿ.ಎಲ್.ಆರ್ಟ್ಸ್ ಗೋಕರ್ಣ, ಕೆಟಿಐ ಪ್ಲಸ್ ಡಿಪ್ಲೊಮಾ ವಿದ್ಯಾರ್ಥಿಗಳು, ಸೈಕಲ್ ರ‍್ಯಾಲಿಯಲ್ಲಿ ವಿಷ್ಣು ತೋಡ್ಕರ್, ವಿನೋದ ನಾಯ್ಕ, ಧರತಿ ಭುಜಲೆ, ಪ್ರೀತಿ ಸಾವಂತ ಅನುಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರು. ಮಕ್ಕಳಿಗಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ನಸೀಮ ಶೇಖ್, ಅನ್ವಿತಾ ನಾಯಕ, ಗಾಳಿಪಟ ಸ್ಪರ್ಧೆಯಲ್ಲಿ ಪ್ರಶಾಂತ, ರಾಘವೇಂದ್ರ ಮೊದಲೆರಡು ಸ್ಥಾನಗಳನ್ನು ಪಡೆದರು. ಸಾಯಂಕಾಲ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net