ವಿಶ್ವ ತಂಬಾಕು ರಹಿತ ದಿನಾಚರಣೆ

tobacco day
Published on

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನ ಶುಕ್ರವಾರ ಆಚರಿಸಲಾಯಿತು.

ತಂಬಾಕು ಸೇವನೆಯ ದುಷ್ಪರಿಣಾಮಗಳು, ಇದರಿಂದ ಉಂಟಾಗುವ ರೋಗಗಳು ಹಾಗೂ ಸೇವನೆ ಚಟದಿಂದ ಹೊರಬರುವ ವಿಧಾನಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸ್ನಾತಕೋತ್ತರ ವಿದ್ಯಾರ್ಥಿ ಡಾ.ಕೋಮಲ್ ಕಾಲೆ ಹಾಗೂ ದ್ವಿತೀಯ ವರ್ಷದ ಬಿ.ಎ.ಎಂ.ಎಸ್.ಕಲಿಕಾ ವಿದ್ಯಾರ್ಥಿ ಭವಿತ್ ಶೆಟ್ಟಿ ಪ್ರಾತ್ಯಕ್ಷಿಕೆ ನೀಡಿದರು.

ದ್ವಿತೀಯ ಬಿ.ಎ.ಎಂ.ಎಸ್. ಕಲಿಕಾ ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ., ಸಂಸ್ಥೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೀಲಾ ಎಂ.ಎ.ಪ್ರತಿಜ್ಞಾವಿಧಿ ಬೋಧಿಸಿದರು. ಚಿನ್ಮಯಿ ಪ್ರಾರ್ಥಿಸಿ, ಸ್ವಾತಿ ಆರ್.ಎನ್.ಸ್ವಾಗತಿಸಿ, ಸ್ನೇಹಾ ಕೆ.ಸಿ. ವಂದಿಸಿ, ಸಂಪತ್ ಎಸ್.ಎಚ್. ಹಾಗೂ ದೀಕ್ಷಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net