ಕಡಬ: ಇಲ್ಲಿನ ವಿದ್ಯಾರಶ್ಮಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಡೆಸಲಾಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ನಾವು ಪ್ರಾಪಂಚಿಕ ಹವಾಮಾನದ ವಿದ್ಯಮಾನಗಳನ್ನು ಗಮನಿಸಬೇಕು. ಹಸಿರೇ ಇಲ್ಲದ ಊರಿನಲ್ಲಿ ಧಾರಾಕಾರ ಮಳೆ ಸುರಿದರೆ ಹಸಿರು ಇರುವಲ್ಲಿ ಮಳೆಯೇ ಇಲ್ಲದಂತಾಗಿದೆ. ಯಾಕೆ ಹೀಗೆ ಆಗುತ್ತಿದೆ ಎಂಬುದಕ್ಕೆ ಕಾರಣ ಹುಡುಕಿದರೆ ಅದು ಪರಿಸರದ ಅಸಮತೋಲನವಾಗಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಮಗಿರುವ ಸುಲಭ ಮತ್ತು ಪರಿಣಾಮಕಾರಿ ಉಪಾಯ ಎಂದರೆ ಗಿಡ ನೆಡುವುದು ಮತ್ತು ಮರಗಳನ್ನು ಬೆಳೆಸುವುದಾಗಿದೆ ಎಂದರು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿ, ಉಪ ಪ್ರಾಂಶುಪಾಲರುಗಳಾದ ಶೇಷಗಿರಿ ಎಂ.ಮತ್ತು ಶಶಿಕಲಾ ಎಸ್.ಆಳ್ವ, ರಾ.ಸೇ.ಯೋಜನಾಧಿಕಾರಿ ನಿರಂಜನ್, ಪಾಲಕರು, ಸಿಬ್ಬಂದಿ ವರ್ಗ ಮತ್ತು ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದ್ವಿತಿಯ ಬಿ.ಕಾಂ.ನ ಪಲ್ಲವಿ ಎಸ್.ಸ್ವಾಗತಿಸಿದರು. ಮತ್ತು ಪ್ರೀತಿ ಶೆಟ್ಟಿ ಸ್ವಾಗತ ವಂದಿಸಿದರು. ತೃತೀಯ ಬಿ.ಎ.ಯ ಪ್ರವೀಣ್ ನಿರೂಪಿಸಿದರು.