ಚೆಸ್​ ವಿಶ್ವಕಪ್​ನಲ್ಲಿ ಸೆಮೀಸ್​ ಹಂತದ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ

pragg web
Published on

ಬಾಕು (ಅಜರ್​ಬೈಜಾನ್​): ಭಾರತದ ಯುವ ಆಟಗಾರ ಆರ್​. ಪ್ರಜ್ಞಾನಂದ ಚೆಸ್​ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್​ ಹಂತದ ಮೊದಲ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಡ್ರಾ ಸಾಧಿಸಿದ್ದಾರೆ. ಭಾನುವಾರ ಈ ಮುಖಾಮುಖಿಯ 2ನೇ ಪಂದ್ಯ ನಡೆಯಲಿದ್ದು, ಅದರಲ್ಲಿ ಗೆದ್ದರೆ ಪ್ರಜ್ಞಾನಂದ ಫೈನಲ್​ ಪ್ರವೇಶಿಸಲಿದ್ದಾರೆ. 2ನೇ ಪಂದ್ಯವೂ ಡ್ರಾಗೊಂಡರೆ ಸೋಮವಾರ ಟೈಬ್ರೇಕರ್​ ಕಾದಾಟ ನಡೆಯಲಿದೆ.

ದಿಗ್ಗಜ ವಿಶ್ವನಾಥನ್​ ಆನಂದ್​ ಬಳಿಕ ಟೂರ್ನಿಯ ಉಪಾಂತ್ಯದಲ್ಲಿ ಆಡುತ್ತಿರುವ ಮೊದಲ ಭಾರತೀಯರೆನಿಸಿರುವ 18 ವರ್ಷದ ಪ್ರಜ್ಞಾನಂದ, ವಿಶ್ವ ನಂ. 3 ಕರುವಾನಾಗೆ ನಿಕಟ ಪೈಪೋಟಿ ಒಡ್ಡಿ 78ನೇ ನಡೆಯ ಬಳಿಕ ಅಂಕ ಹಂಚಿಕೊಂಡರು.

ಇನ್ನೊಂದು ಸೆಮಿೈನಲ್​ ಹಣಾಹಣಿಯ ಮೊದಲ ಪಂದ್ಯದಲ್ಲಿ ವಿಶ್ವ ನಂ. 1 ನಾರ್ವೆಯ ಮ್ಯಾಗ್ನಸ್​ ಕಾರ್ಲ್​ಸೆನ್​, ಆತಿಥೇಯ ದೇಶದ ನಿಜತ್​ ಅಬಸೋವ್​ ವಿರುದ್ಧ ಗೆಲುವು ದಾಖಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net