ಸಾಕು ನಾಯಿಯೊಂದಿಗೆ ಚಲಿಸುತ್ತಿದ್ದ ರೈಲು​ ಹತ್ತಲು ಹೋದ ವ್ಯಕ್ತಿ! ಮಿಸ್​ ಆಗಿ ಕೆಳಕ್ಕೆ ಬಿತ್ತು ನಾಯಿ; ಮುಂದೆ ಆಗಿದ್ದೇನು? Train

train dog
Published on

train | ಇಲ್ಲೊಬ್ಬ ಸಾಕು ನಾಯಿಯೊಂದಿಗೆ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ತನ್ನ ನಾಯಿಯ ಆಪತ್ತಿಗೆ ಕಾರಣವಾದ ಘಟನೆ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿರುವಾಗಲೇ ಅದರ ಮಾಲೀಕ ತನ್ನ ಅಜಾಗರೂಕತೆಯಿಂದ ನಾಯಿಯೊಡನೆ ರೈಲು ಹತ್ತಲು ಪ್ರಯತ್ನಿಸಿದ್ದಾನೆ. ರೈಲು ಹತ್ತಲೆಂದು ತನ್ನ ನಾಯಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾನೆ. ಕೊನೆಗೆ ರೈಲಿನ ವೇಗ ಹೆಚ್ಚಾದ ಕಾರಣ ರೈಲು ಹತ್ತಲು ಸಾಧ್ಯವಾಗಿಲ್ಲ. ಆದರೆ ನಾಯಿ ಮಾತ್ರ ರೈಲ್ವೆ ಹಳಿಯ ಸಮೀಪಕ್ಕೆ ಜಾರಿದೆ.

ಕೆಲವೇ ಸೆಕೆಂಡುಗಳಲ್ಲಿ, ಅವನು ಒಂದು ಕೈಯಲ್ಲಿ ರೈಲಿನ ಬಾಗಿಲನ್ನು ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಸಾಕುಪ್ರಾಣಿಯನ್ನು ಎಳೆದುಕೊಂಡು ರೈಲನ್ನು ಹತ್ತಲು ಪ್ರಯತ್ನಿಸುತ್ತಾನೆ. ವಿಪರ್ಯಾಸವೆಂದರೆ, ನಾಯಿಯನ್ನು ಹಿಡಿದಿಡಲು ಸಾಧ್ಯವಾಗದ ಕಾರಣ ನಾಯಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿ, ಕೊನೆಗೆ ರೈಲ್ವೆ ಹಳಿಯ ಸಮೀಪಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಆ ವ್ಯಕ್ತಿ ತನ್ನ ಸಾಕುಪ್ರಾಣಿಯನ್ನು ಹುಡುಕುತ್ತಾ ಸುತ್ತಲೂ ನೋಡುತ್ತಿರುವುದನ್ನು ನಾವು ಗಮನಿಸಬಹುದು. ಸದ್ಯ ಈ ಘಟನೆಯಲ್ಲಿ ನಾಯಿ ಬದುಕುಳಿದಿದೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಆ ರೈಲನ್ನು ದೆಹಲಿಗೆ ಹೋಗುವ ಸಿಎಸ್‌ಎಂಟಿ-ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಎನ್ನಲಾಗಿದ್ದು, ಈ ಘಟನೆಯ ಮನಕಲಕುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ರೈಲು ವೇಗವಾಗಿ ಚಲಿಸುತ್ತಿದ್ದಾಗ, ನೀಲಿ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ ವ್ಯಕ್ತಿ, ತನ್ನ ಗೋಲ್ಡನ್ ರಿಟ್ರೈವರ್ ನಾಯಿಯೊಂದಿಗೆ ರೈಲು ಹತ್ತಲು ಓಡುತ್ತಿರುವ ದೃಶ್ಯವನ್ನು ನಾವು ಕಾಣಬಹುದು.

ಕಾನೂನು ಕ್ರಮಕ್ಕೆ ಆಗ್ರಹ:

ಆದಾಗ್ಯೂ ವೈರಲ್ ಆಗಿರುವ ಈ ವಿಡಿಯೋ ನೋಡಿದ ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಮಾಲೀಕರ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಘಟನೆಗಳನ್ನು ಉಂಟುಮಾಡುವ ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರೆಬೇಕೆಂದು ಆಗ್ರಹಿಸಿದ್ದಾರೆ. ಪ್ರಾಣಿ ಹಿಂಸೆಗೆ ಸಂಬಂಧಿಸಿದ ಬಿಎನ್‌ಎಸ್ ವಿಭಾಗಗಳ ಅಡಿಯಲ್ಲಿ ಸಾಕುಪ್ರಾಣಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಕೂಗು ಸಹ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net