ಕೊಲಂಬೊ: ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡಿದ್ದು, ಜುಲೈ 27ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಸರಣಿಗೆ ಭಾರತ ತಂಡಕ್ಕೆ ತರಬೇತಿ ನೀಡಲಿದ್ದಾರೆ. ನೂತನ ಕೋಚ್ ಗೌತಮ್ ಮುಂದೆ ಬೆಟ್ಟದಷ್ಟು ಸವಾಲಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ದ್ವಿಪಕ್ಷೀಯ ಹಾಗೂ ಐಸಿಸಿ ಟೂರ್ನಮೆಂಟ್ಗಳಿಗೆ ತಂಡವನ್ನು ಸಜ್ಜಗೊಳಿಸಬೇಕಿದೆ.
ವಿಭಿನ ತಂತ್ರ ಅನುಸರಿಸುವುದಕ್ಕೆ ಹೆಸರುವಾಸಿಯಾಗಿರುವ ಗೌತಮ್ ನೂತನ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಖಡಕ್ ಮಾತುಗಳನ್ನು ಆಡಿದ್ದು, ಹಲವು ವಿಚಾರಗಳ ನ್ನು ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಆಪತ್ಭಾಂದವ ಎಂದೇ ಕರೆಯಲ್ಪಡುವ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿರುವ ಗೌತಮ್ ಗಂಭೀರ್ ಅವರನ್ನು ಹಾಡಿಹೊಗಳಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಲೇಬೇಕಾದ ಸ್ಥಿತಿಯಲ್ಲಿ ಭಾರತ; ಬಿಸಿಸಿಐ ಮುಂದಿನ ನಡೆ ಏನು?
ನಾನು ಈ ಮೊದಲೇ ಹೇಳಿದಂತೆ ಜಸ್ಪ್ರೀತ್ ಬುಮ್ರಾನಂತಹ ವೇಗಿಗಳಿಗೆ ಕೆಲಸದ ಒತ್ತಡ ನಿರ್ವಹಣೆ ಮುಖ್ಯ. ಆತ ಒಬ್ಬ ಅಪರೂಪದ ಬೌಲರ್ ಆಗಿದ್ದು, ಆತ ಪ್ರಮುಖ ಓವರ್ಗಳಲ್ಲಿ ಆತ ಆಡಬೇಕೆಂದು ಎಲ್ಲರೂ ಬಯಸುತ್ತಾರೆ. ಇದಲ್ಲದೆ ಬೇರೆ ಆಟಗಾರರಿಗೂ ಕೆಲಸದ ಒತ್ತಡ ನಿರ್ವಹಣೆ ಅತಿಮುಖ್ಯವಾಗಿದ್ದು, ಎಲ್ಲರೂ ಇದನ್ನು ಅನುಸರಿಬೇಕಾಗಿದೆ.
ನೀವು ಒಬ್ಬ ಬ್ಯಾಟರ್ ಆಗಿ ಚೆನ್ನಾಗಿ ಆಡಿದಾಗ ಎಲ್ಲಾ ಸ್ವರೂಪಗಳಲ್ಲೂ ಸ್ಥಾನ ಪಡೆಯಬಹುದು. ರೋಹಿತ್ ಹಾಗೂ ವಿರಾಟ್ ಟಿ20 ಮಾದರಿಯಿಂದ ನಿವೃತ್ತಿಯಾಗಿದ್ದು, ಅವರು ಇನ್ನು ಮುಂದೆ ಎರಡು ಫಾರ್ಮ್ಯಾಟ್‌ಗಳನ್ನು ಆಡಲಿದ್ದಾರೆ. ಆಶಾದಾಯಕವಾಗಿ ಹೆಚ್ಚಿನ ಆಟಗಳಿಗೆ ಲಭ್ಯವಿವೆ ಎಂದು ಟೀಮ್ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.