ಕಾರ್ಮಿಕರ ಮಾಹಿತಿ ಕಾರ್ಯಾಗಾರ

mahiti karyagara
ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಕುಂದಾಪುರದಲ್ಲಿ ನಡೆಯಿತು.
Published on

ಕುಂದಾಪುರ: ಭಾರತೀಯ ಆಟೋರಿಕ್ಷಾ ಮಜ್ದೂರ್ ಸಂಘದ ಆಶ್ರಯದಲ್ಲಿ ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಕುಂದಾಪುರದಲ್ಲಿ ಭಾನುವಾರ ನಡೆಯಿತು. ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನದಾಸ ಶೆಣೈ ಕಾರ್ಯಾಗಾರ ಉದ್ಘಾಟಿಸಿದರು. ಬಿಎಂಎಸ್ ಸಂಘಟನೆಯ 18ನೇ ವಾರ್ಷಿಕ ಮಹಾಸಭೆ ನಡೆಯಿತು. ಬಿಎಂಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಪುತ್ರನ್ ಸಂಘಟನೆ ಏಳಿಗೆಗೆ ಕರೆ ನೀಡಿದರು. ಅಧ್ಯಕ್ಷ ಅಶೋಕ್ ಕೆರೆಕಟ್ಟೆ, ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘ ಅಧ್ಯಕ್ಷ ಗಿರೀಶ್ ಕುಂದಾಪುರ, ಕೆ.ಟಿ.ಸತೀಶ್, ಉಪಾಧ್ಯಕ್ಷ ಭಾಸ್ಕರ್ ಖಾರ್ವಿ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಕೃಷ್ಣಮೂರ್ತಿ, ಕುಂದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ. ಎಸ್. ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ್ ಸ್ವಾಗತಿಸಿದರು. ಶಂಕರ್ ಅಂಕದಕಟ್ಟೆ ಪ್ರಸ್ತಾವನೆಗೈದರು. ಶ್ರೀಧರ್ ಮೊಗವೀರ ವರದಿ ಮಂಡಿಸಿದರು. ವಿಜಯ್ ಕಡ್ಗಿ ಲೆಕ್ಕಪತ್ರಗಳನ್ನು ಮಂಡಿಸಿದರು. ಅಶೋಕ್ ಪೂಜಾರಿ ಕೋಡಿ ವಂದಿಸಿದರು. ರವಿ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಮಂಡಳಿಗಳ ಮಾಹಿತಿ

ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕುಂದಾಪುರದ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕೆ. ಅವರು ಕರ್ನಾಟಕ ರಾಜ್ಯ ಮೋಟಾರ್ ಸಾರಿಗೆ ನೌಕರರು, ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಬಗ್ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net