ಬ್ಲ್ಯಾಕ್​ ಆಂಡ್​ ವೈಟ್​ ಚಾಲೆಂಜ್​ನಲ್ಲಿ ಮಹಿಳಾ ಕ್ರೀಡಾತಾರೆಯರು

challenge
Published on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಹೊಸ ಚಾಲೆಂಜ್​ ಶುರುವಾಗಿದೆ. ಅದುವೇ ಬ್ಲ್ಯಾಕ್​ ಆಂಡ್​ ವೈಟ್​ ಚಾಲೆಂಜ್​. ಸ್ತ್ರೀ ಶಕ್ತಿ, ಸಬಲೀಕರಣ ಮತ್ತು ಸ್ತ್ರೀ ಸ್ವಾತಂತ್ರ್ಯವನ್ನು ಬೆಂಬಲಿಸುವ ಈ ಚಾಲೆಂಜ್​ ಶುರುವಾಗಿದ್ದು ವಿದೇಶದಲ್ಲಿ. ಈಗಾಗಲೆ ಭಾರತದ ಹಲವು ಸೆಲೆಬ್ರಿಟಿ ಮಹಿಳೆಯರು ಈ ಟ್ರೆಂಡ್​ನಲ್ಲಿ ಭಾಗಿಯಾಗಿದ್ದಾರೆ. ಈಗ ಭಾರತದ ಮಹಿಳಾ ಕ್ರೀಡಾ ತಾರೆಯರೂ ಈ ಅಭಿಯಾನದಲ್ಲಿ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ.

ಟೆನಿಸ್​ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್​ ತಾರೆಯರಾದ ಪಿವಿ ಸಿಂಧು, ಸೈನಾ ನೆಹ್ವಾಲ್​, ಕ್ರಿಕೆಟ್​ ತಾರೆಯರಾದ ಸ್ಮೃತಿ ಮಂದನಾ, ಮಿಥಾಲಿ ರಾಜ್​, ಜೆಮೀಮಾ ರೋಡ್ರಿಗಸ್​, ಕನ್ನಡತಿ ವೇದಾ ಕೃಷ್ಣಮೂರ್ತಿ, ಶೂಟರ್​ ಅಂಜುಂ ಮೌದ್ಗಿಲ್​, ಟೇಬಲ್​ ಟೆನಿಸ್​ ತಾರೆ ಮನಿಕಾ ಬಾತ್ರಾ, ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್​ ಮತ್ತಿತರರು ಕಪ್ಪು-ಬಿಳುಪಿನ ಚಿತ್ರಗಳನ್ನು ಹಂಚಿಕೊಂಡು ಮಹಿಳೆಯ ಬೆಂಬಲ ಮಹಿಳೆಗೆ ಎಂದಿದ್ದಾರೆ.

ಟೇಬಲ್​ ಟೆನಿಸ್​ ತಾರೆ ಮನಿಕಾ ಬಾತ್ರಾ

ಈ ಅಭಿಯಾನದ ಅಂಗವಾಗಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಪ್ಪು-ಬಿಳುಪು ಚಿತ್ರಗಳನ್ನು ಹೊಂಚಿಕೊಂಡು, ಬೇರೆಯವರಿಗೂ ಈ ಚಾಲೆಂಜ್​ ವರ್ಗಾಯಿಸುತ್ತಿದ್ದಾರೆ.

ಜೆಮೀಮಾ ರೋಡ್ರಿಗಸ್​

ಮಿಥಾಲಿ ರಾಜ್​

ಸ್ಮೃತಿ ಮಂದನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net