ಮಹಿಳಾ ಹಕ್ಕುಗಳ ಚಳವಳಿಗೆ ಅಡಿಪಾಯ ಹಾಕಿದ ಮಾತೆ ಸಾವಿತ್ರಿಬಾಯಿ ಪುಲೆ

Women's Rights Movement, Shiradona, Savitribai Pule, Revathagaon, Vijayakumar Satapute,
ರೇವತಗಾಂವ ಸಮೀಪದ ಶಿರಾಡೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಣೆ ಮಾಡಲಾಯಿತು. ವಿಜಯಕುಮಾರ ಸಾತಪುತೆ, ಬಿ.ಎಂ.ಪಾಟೀಲ, ತ್ರಿವೇಣಿ ಪಾಂಡ್ರೆ ಇತರರಿದ್ದರು.
Published on

ರೇವತಗಾಂವ: ಸಾವಿತ್ರಿಬಾಯಿ ಪುಲೆ ಅವರು ಸ್ವಾತಂತ್ರೃ ಪೂರ್ವದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದುಡಿದರು. ಅವರ ಸೇವೆ ಭಾರತದಲ್ಲಿ ಮಹಿಳಾ ಹಕ್ಕುಗಳ ಚಳವಳಿಗೆ ಅಡಿಪಾಯ ಹಾಕಿತು ಎಂದು ಶಿರಾಡೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ವಿಜಯಕುಮಾರ ಸಾತಪುತೆ ಹೇಳಿದರು.

ಶಿರಾಡೋಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕಿ ಬಿ.ಎಂ.ಪಾಟೀಲ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರು ಸ್ವತಂತ್ರ ಪೂರ್ವ ಭಾರತದಲ್ಲಿ ಮಹಾರಾಷ್ಟ್ರ ರಾಜ್ಯದ ಸಮಾಜ ಸುಧಾರಕರು, ಕವಿ ಹಾಗೂ ಶಿಕ್ಷಣ ತಜ್ಞರಾಗಿದ್ದರು. ಭಾರತದಲ್ಲಿ ಮೊದಲ ಮಹಿಳಾ ಶಾಲೆ ತೆರೆದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದಾರೆ. ಜಾತಿ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಹೋರಾಡಿ ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದರು ಎಂದರು.

ತ್ರಿವೇಣಿ ಪಾಂಡ್ರೆ ಪ್ರಾಸ್ತಾವಿಕವಾಗಿ ಮಾತನಾದರು. ವಿ.ಎಸ್.ನಿಂಬರಗಿ ಸ್ವಾಗತಿಸಿದರು. ಎಸ್.ಎಸ್.ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net