ನಾಳೆ ಸುಳ್ಯದಲ್ಲಿ ಮಹಿಳಾ ಕ್ರೀಡಾಕೂಟ

Published on

ಸುಳ್ಯ: ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ ಇದರ ಆಯೋಜನೆಯಲ್ಲಿ ಮಹಿಳಾ ಕ್ರೀಡಾಕೂಟ ಜ.25ರಂದು ಸುಳ್ಯದ ಜೆ.ಸಿ.ಗ್ರೌಂಡ್ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.

ಬೆಳಗ್ಗೆ ಉದ್ಘಾಟನೆಯ ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧೆಗಳ ವಿವರ: ಹಗ್ಗ ಜಗ್ಗಾಟ, ರಿಲೇ (4*100), 25-35 ವಯೋಮಿತಿಯವರಿಗೆ-100 ಮೀ. ಓಟ, 50 ಮೀ, ಲಿಂಬೆ ಚಮಚ ಓಟ, ಗುಂಡು ಎಸೆತ, ವೇಗದ ಸೈಕಲ್ ಓಟ, ನಿಧಾನ ಸ್ಕೂಟಿ ಸವಾರಿ, ಗುರಿ ಆಟ, ವಯಸ್ಸು 35-45 ವಯೋಮಿತಿಯವರಿಗೆ 100 ಮೀ.ಓಟ, 50 ಮೀ. ಲಿಂಬೆ ಚಮಚ ಓಟ, ಗುಂಡು ಎಸೆತ, ಸ್ಕಿಪಿಂಗ್ (1 ನಿಮಿಷ), ನಿಧಾನ ಸ್ಕೂಟಿ ಸವಾರಿ, ಗುರಿ ಆಟ, ವಯಸ್ಸು 45-55: 50 ಮೀಟರ್ ಕಾಲ್ನಡಿಗೆ, 50 ಮೀ ಲಿಂಬೆ ಚಮಚ ಓಟ, ಗುಂಡು ಎಸೆತ, ಸ್ಕಿಪ್ಪಿಂಗ್ (1 ನಿಮಿಷ), ನಿಧಾನ ಸ್ಕೂಟಿ ಸವಾರಿ, ಗುರಿ ಆಟ. ವಯಸ್ಸು 55ಮೇಲ್ಪಟ್ಟು-50 ಮೀ. ಕಾಲ್ನಡಿಗೆ, 50 ಮೀ. ನಿಂಬೆ ಚಮಚ ಓಟ, ಗುಂಡು ಎಸೆತ, ಸ್ಕಿಪ್ಪಿಂಗ್, ನಿಧಾನ ಸ್ಕೂಟಿ ಸವಾರಿ, ಗುರಿ ಆಟ ಗಳನ್ನು ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net