ಅತ್ಯುತ್ತಮ ಮಹಿಳಾ ರೆಸ್ಲರ್ ಪ್ರಶಸ್ತಿಗೆ ಘೋಷಿಸಿದ ಬಹುಮಾನ ಏನು ಗೊತ್ತೇ..?

Wrestling Asian Championships
Naomi RUIKE (JPN) df. Sakshi MALIK (IND)
Published on

ಆಗ್ರಾ: ಕ್ರೀಡಾಕೂಟಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಟ್ರೋಫಿ, ವಾಹನ, ನಗದು ಬಹುಮಾನ ನೀಡುವುದು ವಾಡಿಕೆ. ಆದರೆ, ರಾಷ್ಟ್ರೀಯ ಮಹಿಳಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಕುಸ್ತಿಪಟುವಿಗೆ 1.50 ಲಕ್ಷ ರೂಪಾಯಿ ಬೆಲೆಬಾಳುವ ಎಮ್ಮೆಯನ್ನು ಬಹುಮಾನ ರೂಪದಲ್ಲಿ ನೀಡಲಾಗುತ್ತಿದೆ. ಚಾಂಪಿಯನ್‌ಷಿಪ್‌ನ ಆಯೋಜಕ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹವೀರ್ ಪ್ರವಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಬಹುಮಾನ ಗೆದ್ದ ಪಡೆದ ಕ್ರೀಡಾಪಟು, ಎಮ್ಮೆಯನ್ನು ಕೊಂಡೊಯ್ಯಲು ಸಾಧ್ಯವಾಗದೇ ಇದ್ದರೆ ಬದಲಿಗೆ 1.50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಟೆಸ್ಟ್ ಸರಣಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಯುವ ಕ್ರಿಕೆಟಿಗರಾದ ಟಿ.ನಟರಾಜನ್, ಶಾರ್ದೂಲ್ ಠಾಕೂರ್, ಶುಭಮಾನ್ ಗಿಲ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್ ಹಾಗೂ ನವದೀಪ್ ಸೈನಿಗೆ ಮಹಿಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹಿಂದ್ರಾ ಎಸ್‌ಯುವಿ ಕಾರುಗಳನ್ನು ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net