ನಾಯಿ ಮರಿಗಳ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ ಮಹಿಳೆಯರು...Puppies

Puppies
Published on

ಉತ್ತರ ಪ್ರದೇಶ: ಇಲ್ಲಿನ ಮಿರತ್​ ಪ್ರಾಂತ್ಯದಲ್ಲಿ ಐದು ಬೀದಿ ನಾಯಿ ಮರಿಗಳ(Puppies) ಮೇಲೆ ಪೆಟ್ರೋಲ್​ ಸುರಿದು ಜೀವಂತ ಸುಡಲಾಗಿದೆ ಎಂಬ ಆರೋಪದ ಮೇಲೆ ಇಬ್ಬರು ಮಹಿಳೆಯರ ಮೇಲೆ ಪ್ರಕರಣ ದಾಖಲಾಗಿದೆ.

ಇಬ್ಬರು ಆರೋಪಿಗಳನ್ನು ಶೋಭಾ ಮತ್ತು ಆರತಿ ಎಂದು ಗುರುತಿಸಲಾಗಿದೆ. ಪ್ರತಿ ದಿನ ನಾಯಿ ಮರಿಗಳ ಶಬ್ಧದಿಂದ ಬೇಸರಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಅನಿಮಲ್​ ಕೇರ್​ ಸೋಸೈಟಿಯ ಪ್ರಧಾನ ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ ಕೊಟ್ಟ ದೂರಿನ ಮೇರೆಗೆ ಪೊಲೀಸರು ಕೇಸ್​ ದಾಖಲಿಸಿದ್ದಾರೆ. ದೂರಿನ ಪ್ರಕಾರ ನ.05 ರಂದು ಈ ಘಟನೆ ನಡೆದಿದೆ.

ಇನ್ನು ಈ ಘಟನೆ ನಡೆಯುತ್ತಿರುವಾಗ ಸ್ಥಳೀಯರು ಆರೋಪಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ, ಆರೊಪಿಗಳು ಇಬ್ಬರು ಧಮ್ಕಿ ಹಾಕಿದ್ದಾರೆ. ಬಳಿಕ ಪೊಲೀಸರು ಕರೆ ಮಾಡಿ ನಡೆದ ಘಟನೆ ವಿವರಿಸಿದರೂ ಯಾವ ಕ್ರಮಕೈಗೊಂಡಿಲ್ಲ ಎಂದು ಸ್ಥಳಿಯರು ಹೇಳಿಕೆ ನೀಡಿದ್ದಾರೆ. ಕೃತ್ಯದ ಕುರಿತು ಅನಿಮಲ್​ ಕೇರ್​ ಸೋಸೈಟಿಯ ಪ್ರಧಾನ ಕಾರ್ಯದರ್ಶಿ ಅಂಶುಮಾಲಿ ಸ್ಥಳಕ್ಕೆ ಬಂದ ಮೇಲೆ ದೂರು ದಾಖಲಾಗಿದೆ.

ಇನ್ನು ಠಾಣಾಧಿಕಾರಿ ಜಿತೇಂದ್ರ ಕುಮಾರ್ ಮಾತನಾಡಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಸೆಕ್ಷನ್​ 325 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪೂರ್ಣ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

''ದೂರಿನ ಮೇರೆಗೆ ನಾಯಿ ಮರಿಗಳ ಮರೋಣತ್ತರ ಪರಿಕ್ಷೆ ನಡೆಸಲಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ'' ಎಂದು ಎಸ್​ಪಿ ಆಯುಷ್​ ವಿಕ್ರಮ್​ ಹೇಳಿದ್ದಾರೆ.

ಮೂರು ದಿನಗಳ ಹಿಂದೆ ಜನ್ಮ ಪಡೆದ ಐದು ಬೀದಿ ನಾಯಿಗಳ ಮರಿಗಳು ರಾತ್ರಿ ವೇಳೆ ಶಬ್ಧ ಮಾಡುವುದರಿಂದ ನಿದ್ದೆಗೆ ಅಡ್ಡಿ ಆಗುತ್ತಿತ್ತು. ರಾತ್ರಿ ಸಮಯದಲ್ಲಿ ಮರಿಗಳ ಬೊಗಳುವದನ್ನು ಕೇಳಲಾಗದೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವುದಾಗಿ ಮಹಿಳೆಯರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net