

Zodiac signs : ರಾಶಿಚಕ್ರ ಮತ್ತು ಮನುಷ್ಯನ ವ್ಯಕ್ತಿತ್ವದ ನಡುವಿನ ಸಂಬಂಧವು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಮುಖ ಅಂಶವಾಗಿದೆ. ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ಸಮಯದಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿಚಕ್ರದ ಸ್ಥಾನವು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅದೇ ರೀತಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿ ತುಂಬಾ ಸೌಮ್ಯ ಮತ್ತು ಮುಗ್ಧರು. ಹೀಗಾಗಿ, ಇವರು ಯಾರನ್ನೂ ಬೇಕಾದರೂ ಸುಲಭವಾಗಿ ನಂಬುತ್ತಾರೆ. ಹಾಗಾದರೆ, ಯಾವ ಸ್ತ್ರೀ ರಾಶಿಚಕ್ರ ಚಿಹ್ನೆಗಳು ಅಂತಹ ಮುಗ್ಧ ಸ್ವಭಾವದೊಂದಿಗೆ ಜನಿಸುತ್ತಾವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ಕಾಳಜಿಯುಳ್ಳ ಮತ್ತು ಪೋಷಿಸುವ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಅವರು ಸ್ವಾಭಾವಿಕವಾಗಿ ಎಲ್ಲವನ್ನೂ ಸಕಾರಾತ್ಮಕ ಆಲೋಚನೆಗಳಿಂದ ನೋಡುವ ಉತ್ತಮ ಗುಣವನ್ನು ಹೊಂದಿರುತ್ತಾರೆ. ಇದೇ ಗುಣ ಅವರನ್ನು ಮೋಸಗೊಳಿಸುವ ಉದ್ದೇಶದಿಂದ ಬರುವವರನ್ನು ಸಹ ಒಳ್ಳೆಯ ಜನರು ಎಂದು ಭಾವಿಸುವಂತೆ ಮಾಡುತ್ತದೆ. ಈ ಒಂದು ಸ್ವಭಾವವು ಜೀವನದಲ್ಲಿ ಅನೇಕ ವಂಚನೆಗಳಿಗೆ ಸಿಲುಕಲು ಕಾರಣವಾಗಬಹುದು.
ಮೀನ ರಾಶಿಯಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿ ಕರುಣಾಮಯಿ ಮತ್ತು ಉನ್ನತ ಮಟ್ಟದ ಕಲ್ಪನಾಶಕ್ತಿಯನ್ನು ಹೊಂದಿರುತ್ತಾರೆ. ಜೀವನದ ಸವಾಲುಗಳ ಹೊರತಾಗಿಯೂ, ಅವರು ಮಗುವಿನಂತಹ ಮುಗ್ಧತೆಯನ್ನು ಹೊಂದಿರುವುದರಿಂದ ಅವರು ಹೆಚ್ಚಿನ ಸಮಯ ಮಾನಸಿಕವಾಗಿ ಸಂತೋಷವಾಗಿರುತ್ತಾರೆ. ಆದರೆ, ಕೆಲವರು ತಮ್ಮ ಮುಗ್ಧತೆಯ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಅವರು ನಿರಾಶೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು.
ತುಲಾ ರಾಶಿಯಲ್ಲಿ ಜನಿಸಿದ ಮಹಿಳೆಯರು ಜೀವನದ ಎಲ್ಲಾ ಅಂಶಗಳಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಬಯಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರ ಮುಗ್ಧತೆಯು ಅವರನ್ನು ಎರಡು ಬಾರಿ ಯೋಚಿಸದೆ, ಯಾರನ್ನಾದರೂ ಕುರುಡಾಗಿ ನಂಬುವಂತೆ ಮಾಡುತ್ತದೆ. ಇದು ಅವರನ್ನು ಹೆಚ್ಚಾಗಿ ತೊಂದರೆಗೆ ಸಿಲುಕಿಸುತ್ತದೆ. ಸಂಬಂಧಗಳ ಬಗ್ಗೆ ಅವರ ನಿಲುವು ಶುದ್ಧತೆಯಿಂದ ತುಂಬಿರುತ್ತದೆ. ಹೀಗಾಗಿ ಯಾರಾದರೂ ಅವರನ್ನು ಮೋಸಗೊಳಿಸಲು ಸುಲಭವಾಗುತ್ತದೆ. ಈ ರಾಶಿಯವರು ಇತರರಿಗಿಂತ ಹೆಚ್ಚು ಜಾಗರೂಕರಾಗಿರಬೇಕು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.