

ಬೆಂಗಳೂರು: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅಧ್ಯಕ್ಷತೆಯಲ್ಲಿ ನಿಗಮದ 136ನೇ ನಿರ್ದೇಶಕ ಮಂಡಳಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಹಿಳೆಯರಿಗೆ ಹೊಸ ಯೋಜನೆಗಳ ಅನುಷ್ಟಾನ ಕುರಿತು ಚರ್ಚಿಸಲಾಯಿತು. ಕಿರು ಸಾಲ ಯೋಜನೆ, ಮಾರುಕಟ್ಟೆ ನೆರವು ಯೋಜನೆ, ಸಮೃದ್ದಿ ಯೋಜನೆಗಳ ಪುನರ್ ಆರಂಭ, ಅಭಿವೃದ್ಧಿ ನಿರೀಕ್ಷರ ಪದೋನ್ನತಿ, ಕಂಪ್ಯೂಟರ್ ಆಪರೇಟರ್ಗಳ ನೇಮಕ, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಾಜಿ ದೇವದಾಸಿಗಳ ಮರುಸಮೀಕ್ಷೆ ಹಾಗೂ ಸಹಾಯಧನ, ಪಿಂಚಣಿಗಳ ಬಗ್ಗೆ, ಉದ್ಯೋಗಿನಿ ಯೋಜನೆಯ ಮಾರ್ಗಸೂಚಿ ಸಡಿಲಿಕೆ, ತರಬೇತಿ ಯೋಜನೆಯ ಅನುಷ್ಠಾನ ಕುರಿತು ಕ್ರಮ ಕೈಗೊಳ್ಳಲಾಯಿತು.
ಇದೇ ವೇಳೆ ನಿಗಮದಲ್ಲಿನ ಲೆಕ್ಕಪತ್ರ ವ್ಯವಹಾರಗಳನ್ನು ಪರಿಶೀಲನೆ ಮಾಡಲಾಯಿತು. ಹೊಸ ಕಚೇರಿ ಕಾಮಗಾರಿಯ ಹಂತಗಳ ಬಗ್ಗೆ, ನಿಗಮದ ಜಾಗಕ್ಕೆ ಭದ್ರತೆಯ,ಮಹಿಳೆಯರ, ಧಮನಿತ ಮಹಿಳೆಯರ, ಲಿಂಗತ್ವ ಅಲ್ಪಸಂಖ್ಯಾತರ, ಮಾಜಿ ದೇವದಾಸಿಯವರ ಪರವಾಗಿ ನಿಗಮದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಲರಾಮ್, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ, ಕಂಪನಿ ಕಾರ್ಯದರ್ಶಿ ಶ್ರೀನಿವಾಸ್ ಇತರರು ಇದ್ದರು.