ಮಳೆಯಲ್ಲೇ ಗೃಹಲಕ್ಷ್ಮೀ ಅರ್ಜಿಗೆ ಕಾದುನಿಂತ ಮಹಿಳೆಯರು

Women are waiting for Grilahakshmi application even in the rain
ತೇರದಾಳ ಪಟ್ಟಣದ ಪುರಸಭೆ ಹಳೆಯ ಕಟ್ಟಡದಲ್ಲಿ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಿಟಕಿ ಹೊರಗಡೆ ನಿಂತುಕೊಂಡ ಜನತೆ.
Published on

ತೇರದಾಳ : ಪುರಸಭೆ ಹಳೇ ಕಟ್ಟಡದಲ್ಲಿರುವ ಗೃಹಲಕ್ಷ್ಮೀ ನೋಂದಣಿ ಕೇಂದ್ರದಲ್ಲಿ ಸಾರ್ವಜನಿಕರು ಗುರುವಾರ ಸುರಿಯುವ ಮಳೆಯಲ್ಲೇ ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಿದರು.

ಕೇಂದ್ರದ ವ್ಯವಸ್ಥಾಪಕಿ ಗೌರಿ ಮಾಲಾಪುರ ಮಾಹಿತಿ ನೀಡಿ, ಪ್ರತಿದಿನ ಅಂದಾಜು 200 ಅರ್ಜಿಗಳನ್ನು ಸ್ವೀಕರಿಸುತ್ತಿದ್ದೇವೆ ಎಂದರು.

ಪಟ್ಟಣದ ವಿಶೇಷ ತಹಸೀಲ್ದಾರ್ ಕಚೇರಿ ಆವರಣ, ಬಾಬು ಜಗಜೀವನರಾಂ ಸಭಾಭವನದಲ್ಲಿ ಪುರಸಭೆ ನಿಯೋಜಿತ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಿರಂತರ ಮಳೆಯಿಂದಾಗಿ ಜನರು ಹೈರಾಣಾಗುತ್ತಿದ್ದು, ಪುರಸಭೆ ಹಳೆಯ ಕಟ್ಟಡದಲ್ಲಿನ ಕೇಂದ್ರದಲ್ಲಿ ರಕ್ಷಣೆ ಪಡೆಯಲು ಆಸರೆ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net