

ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಸಮೀಪ ಸಫೇದಾಬಾದ್ನಲ್ಲಿ ಸೂಟ್ಕೇಸ್ ಒಂದರಲ್ಲಿ ಪೀಸ್ಪೀಸ್ ಆಗಿರುವ ಶವ ಪತ್ತೆಯಾಗಿದೆ. ಅದು ಮಹಿಳೆಯ ಶವವಾಗಿದ್ದು, ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಸಫೇದಾಬಾದ್ನ ಫ್ಯಾಕ್ಟರಿಯೊಂದರ ಹೊರಗೆ ಸಂದೇಹಾಸ್ಪದ ಸೂಟ್ಕೇಸ್ ಒಂದು ಪತ್ತೆಯಾಗಿದೆ ಎಂಬ ಮಾಹಿತಿ ಮಂಗಳವಾರ ರಾತ್ರಿ ಲಭಿಸಿತ್ತು. ಕೂಡಲೇ ಸ್ಥಳಕ್ಕೆ ಪೊಲೀಸರು ತೆರಳಿದ್ದು, ಅಲ್ಲಿ ಸೂಟ್ಕೇಸ್ ತೆರೆದು ನೋಡಿದಾಗ ಪೀಸ್ ಪೀಸ್ ಆಗಿದ್ದ ಶವ ಪತ್ತೆಯಾಗಿದೆ. 20ರ ವಯೋಮಾನದ ಮಹಿಳೆಯ ಶವವನ್ನು ತುಂಡರಿಸಿ ಪಾಲಿಥೀನ್ ಕವರ್ನಲ್ಲಿ ತುಂಬಿ ಸ್ಯೂಟ್ಕೇಸ್ನಲ್ಲಿ ಇರಿಸಲಾಗಿತ್ತು. ಸೂಟ್ಕೇಸ್ ಹೊರತಾಗಿ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಪಾಲಿಥೀನ್ ಬ್ಯಾಗ್ ನಲ್ಲಿ ಮಹಿಳೆಯ ತಲೆ ಮತ್ತು ಒಂದು ಕಾಲು ಪತ್ತೆಯಾಗಿದೆ.
ಎಸ್ಪಿ ಅರವಿಂದ ಚತುರ್ವೇದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸೂಟ್ಕೇಸ್ ಮತ್ತು ಪಾಲಿಥೀನ್ ಬ್ಯಾಗ್ಗಳು ಸ್ಥಳದಲ್ಲಿ ಎರಡು ದಿನಗಳಿಂದ ಬಿದ್ದಿರುವಂತೆ ಇದೆ. ಜನ ಸಂಚಾರ ವಿರಳವಾದ್ದರಿಂದ ಯಾರ ಗಮನಕ್ಕೂ ಬಂದಿರಲಿಲ್ಲ. ಕೆಟ್ಟ ವಾಸನೆ ಬರಲು ಆರಂಭಿಸಿದ್ದರಿಂದ ಇದು ಸ್ಥಳೀಯರ ಗಮನಸೆಳೆದಿದೆ. ಮೇಲ್ನೋಟಕ್ಕೆ ಇದು ಮಹಿಳೆಯ ಶವದಂತೆ ಇದೆ. ಬೇರೆಲ್ಲೋ ಹತ್ಯೆ ನಡೆಸಿ ಶವವನ್ನು ಇಲ್ಲಿ ಎಸೆದು ಹೋಗಿರಬೇಕು. ತನಿಖೆಯಲ್ಲಿ ವಿವರ ಬಹಿರಂಗವಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್)