ಪ್ರಿಯಕರನ್ನು ಟ್ರಂಕ್​​ನಲ್ಲಿ ಅಡಗಿಸಿಟ್ಟ ಮಹಿಳೆ: ಬೆತ್ತಲೆಯಾಗಿ ಈಕೆ ಪತಿ ಕೈಗೆ ಸಿಕ್ಕಿಬಿದ್ದ ಗೆಳೆಯ..ಮುಂದೇನಾಯ್ತು? Viral Video

Viral Video
Published on

Viral Video: ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಹೋದ ಪ್ರಿಯಕರ, ಬೆತ್ತಲೆಯಾಗಿ ಆಕೆಯ ಕುಟುಂಬಕ್ಕೆ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಹೋದ ಪ್ರಿಯಕರ ಆಕೆಯ ಮೆನಯಲ್ಲಿ ಬಟ್ಟೆಯಿಲ್ಲದೆ ಟ್ರಂಕ್​​ನಲ್ಲಿ ಅಡಗಿಕೊಂಡಿದ್ದು, ಅವಳ ಕುಟುಂಬ ಸದಸ್ಯರು ಆತನನ್ನು ಹಿಡಿದಿದ್ದಾರೆ. ನಂತರ ಮಹಿಳೆಯ ಪತಿ ಮತ್ತು ಕುಟುಂಬಸ್ಥರು ಕೋಲಿನಿಂದ ಆತನನ್ನು ಹೊಡೆದಿದ್ದಾರೆ, ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಘಟನೆಯ ವಿಡಿಯೋ:

ಮಹಿಳೆಯೂ ತನ್ನ ಮನೆಯಲ್ಲಿ ಕುಟುಂಬ ಸದಸ್ಯರ ಜೊತೆ ನಡೆದುಕೊಳ್ಳುತ್ತಿದ್ದ ರೀತಿಯೂ ಅವರಿಗೆ ಅನುಮಾನ ಹುಟ್ಟಿಸಿತ್ತು. ಹಾಗಾಗಿ ಆಕೆಯ ಪತಿ ಮತ್ತು ಕುಟುಂಬ ಸದಸ್ಯರು ಅವರ ಕೋಣೆಯನ್ನು ಪ್ರವೇಶಿಸಿದಾಗ, ಆಕೆ ಪ್ರಿಯತಮನನ್ನು ಟ್ರಂಕ್‌ನಲ್ಲಿ ಅಡಗಿಸಿಟ್ಟಳು. ನಂತರ ಅವರಿಗೆ ಟ್ರಂಕ್‌ನಲ್ಲಿ ಯಾರೋ ಅಡಗಿ ಕುಳಿತಿದ್ದಾರೆಂದು ಅನುಮಾನ ಮೂಡಿ ಟ್ರಂಕ್​​ ತೆರೆದಾಗ ಒಬ್ಬ ವ್ಯಕ್ತಿ ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೋಪಗೊಂಡ ಕುಟುಂಬಸ್ಥರು ಅವನನ್ನು ಸರಿಯಾಗಿ ಕೋಲಿನಿಂದ ಹೊಡೆದಿದ್ದಾರೆ.

ವಿಡಿಯೋದಲ್ಲಿ ಆ ವ್ಯಕ್ತಿ ಕೈಮುಗಿದು ತನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದರೂ, ಮಹಿಳೆಯ ಕುಟುಂಬ ಸದಸ್ಯರು ಆತನನ್ನು ಥಳಿಸುತ್ತಲೇ ಇದ್ದರು. ಗದ್ದಲ ಕೇಳಿದ ನಂತರ ಸ್ಥಳೀಯರು ಕೂಡ ಅಲ್ಲಿಗೆ ಸ್ಥಳಕ್ಕೆ ಧಾವಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net