Video | ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟಳು; ಅದಕ್ಕೆ ಗಂಡನ ಸಂಬಂಧಿಕರೆಲ್ಲ ಹೀಗೆ ಮಾಡೋದಾ? ನೋಡಿ.. ಇಲ್ಲಿದೆ ಆ ವಿಡಿಯೋ...

woman
Published on

ನವದೆಹಲಿ: ತಾನು ಕೆಲಸಕ್ಕೆ ಹೋದಾಗ ಹೆಂಡತಿ ಸುರಕ್ಷಿತವಾಗಿರಲಿ ಎಂದು ಗಂಡ, ಆಕೆಯನ್ನು ಇನ್ನೊಬ್ಬನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದ. ಆದರೆ ಕ್ರಮೇಣ ಆ ಇನ್ನೊಬ್ಬನ ಜೊತೆಗಿರುವುದನ್ನೇ ಇಷ್ಟ ಪಡಲಾರಂಭಿಸಿದ ಹೆಂಡತಿ ಗಂಡನನ್ನೇ ತೊರೆದಳು. ಇದು ಗಂಡ ಹಾಗೂ ಆತನ ಕಡೆಯವರನ್ನು ರೊಚ್ಚಿಗೆಬ್ಬಿಸಿದ್ದು, ಅವರೆಲ್ಲ ಸೇರಿ ಆಕೆಯ ವಿರುದ್ಧ ವಿಚಿತ್ರ ಹಾಗೂ ಅಮಾನುಷ ಎನ್ನುವ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

ಪ್ರಿಯತಮನಿಗಾಗಿ ಹೀಗೆ ಗಂಡನನ್ನು ತೊರೆದ ಮಹಿಳೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಪತಿಯ ಕಡೆಯವರ ಕೃತ್ಯದ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ, ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಪತ್ನಿಯ ಪತಿದ್ರೋಹದಿಂದ ಸಿಟ್ಟಾದ ಸಂಬಂಧಿಕರು ಆಕೆಯ ಗಂಡನ ತಮ್ಮನನ್ನು ಅವಳ ಹೆಗಲ ಮೇಲೆ ಕೂರಿಸಿಕೊಂಡು ಬೀದಿಯಲ್ಲಿ ನಡೆಸಿದ್ದಾರೆ. ಅವಳಿಗೆ ಛೀಮಾರಿ ಹಾಕುತ್ತ, ಅವಮಾನ ಮಾಡುತ್ತ, ಹೆದರಿಸುತ್ತ ಸುಮಾರು ಮೂರು ಕಿ.ಮೀ. ದೂರ ಗಂಡನ ತಮ್ಮನನ್ನು ಹೊತ್ತು ಸಾಗುವಂತೆ ಮಾಡಿದ್ದಾರೆ. ಅಂದಹಾಗೆ ಮಧ್ಯಪ್ರದೇಶದ ಸಗಾಯ್ ಮತ್ತು ಬಾನ್ಸ್ ಕೆಡಿ ಎಂಬ ಪ್ರದೇಶದ ಮಧ್ಯದಲ್ಲಿನ ಗುನಾ ಎಂಬಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನಾಲ್ವರನ್ನೂ ಬಂಧಿಸಿರುವುದಾಗಿ ಹೇಳಿರುವ ಪೊಲೀಸರು, ಮುಂದೆ ಇಂಥ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸುವುದಾಗಿಯೂ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net