ಖಾಸಗಿ ಅಂಗದಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಬಚ್ಚಿಟ್ಟು ಸಾಗಾಟ

gold
Published on

ಪುಣೆ: ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಚಿನ್ನ ಹಾಗೂ ಡ್ರಗ್ಸ್ ಕಳ್ಳ​ಸಾಗಾಣಿಕೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕಸ್ಟಮ್ಸ್​ ಅಧಿಕಾರಿಗಳು ಎಷ್ಟೇ ಕಠಿಣ ಕ್ರಮ ಜರುಗಿಸಿದರೂ ಸಹ ಇಂತಹ ಘಟನೆಗಳು ಮರುಕಳಿಸುತ್ತಿವೆ.

ಇದೀಗ ಪ್ರಕರಣ ಒಂದರಲ್ಲಿ ಮಹಿಳೆಯೊಬ್ಬರು ತನ್ನ ಖಾಸಗಿ ಅಂಗದೊಳಗೆ 20 ಲಕ್ಷ ರೂ. ಮೌಲ್ಯದ ಚಿನ್ನ ಸಾಗಿಸುತಿದ್ದ ಘಟನೆ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Gold Capsules

ದುಬೈನಿಂದ ಪುಣೆಗೆ ಬಂದಿಳಿದ 41 ವರ್ಷದ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಓಡಾಡುತ್ತಿದ್ದುದ್ದನ್ನು ಕಸ್ಟಮ್ಸ್​ ಅಧಿಕಾರಿಗಳು ಮೊದಲಿಗೆ ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳ ತಂಡ ಮಹಿಳಾ ಸಿಬ್ಬಂದಿಯನ್ನು ಕರೆಸಿ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಖಾಸಗಿ ಅಂಗದಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್​ರೇ ಮಾಡಿಸಿದಾಗ 20.30 ಲಕ್ಷ ರೂಪಾಯಿ ಮೌಲ್ಯದ 423.41 ಗ್ರಾಂ ಚಿನ್ನವನ್ನು ಕ್ಯಾಪ್ಯ್ಸೂಲ್​ ರೂಪದಲ್ಲಿ ತನ್ನ ಖಾಸಗಿ ಅಂಗದಲ್ಲಿ ಇರಿಸಿಕೊಂಡು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net