More

    ತೆಂಗಿನ ಮರದ ಗರಿ ತೆಗೆಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟ ಮಹಿಳೆ

    ಧಾರವಾಡ: ನಗರದಾದ್ಯಂತ ನಿನ್ನೆ ರಾತ್ರಿ ಸುರಿದ ಮಳೆ-ಗಾಳೆಯಿಂದ ಮನೆ ಮೇಲೆ ಬಿದ್ದಿದ್ದ ತೆಂಗಿನ ಮರದ ಗರಿ ತೆಗೆಯಲು ಹೋದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಸಪ್ತಾಪುರ 8ನೇ ಕ್ರಾಸ್‌ನಲ್ಲೇ ಈ ಘಟನೆ ನಡೆದಿದ್ದು, 65 ವರ್ಷದ ಸರೊಜಾ ಸಾಟೆ ಎಂಬುವವರೇ ಮೃತಪಟ್ಟವರು‌. ನಿನ್ನೆ ರಾತ್ರಿ ನಗರಾದ್ಯಂತ ಭಾರೀ ಗಾಳಿ ಬೀಸಿತ್ತು. ಇದರಿಂದ ಮನೆಗೆ ಹೊಂದಿಕೊಂಡಿದ್ದ ತೆಂಗಿನಮರದ ಗರಿಗಳು ಮನೆ ಮೇಲೆ ಬಿದ್ದಿದ್ದವು ಇವುಗಳನ್ನು ತೆರವುಗೊಳಿಸಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದಾಗ ಪಕ್ಕದ ಮನೆಯ ಕಾಂಪೌಂಡ್ ಗೇಟ್‌ಗೆ ಬಡಿದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮನೆಯಲ್ಲಿ ಇವರೊಬ್ಬರೆ ವಾಸವಾಗಿದ್ದರು. ಇದ್ದೊಬ್ಬ ಮಗಳು ಮೈಸೂರಿನಲ್ಲಿದ್ದಾಳೆ. ಮೈಸೂರಿನಿಂದ ಮಗಳು ಬಂದ ನಂತರವಷ್ಟೇ ಅಂತ್ಯಕ್ರಿಯೆ ನಡೆಯಬೇಕಿದೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    COVID19 : ಶಾಸಕ ವೀರಣ್ಣ ಚರಂತಿಮಠ ಅವರಿಗೆ ಫೋನ್ ಮಾಡಿದ ಸಿಎಂ ಬಿಎಸ್​ವೈ

    ಏಳು ಲಕ್ಷ ದಾಟಿತು ಕರೊನಾ ಸೋಂಕುಪೀಡಿತರ ಸಂಖ್ಯೆ ಅಮೆರಿಕದಲ್ಲಿ…

    ಒಂದೇ ಒಂದು ಆ್ಯಪಲ್​ ನಿಂದಾಯಿತು ಭಾರಿ ಅನಾಹುತ!- ಡಿಎನ್​ಎ ಪರೀಕ್ಷೆ ಮಾಡಿ ಅದನ್ನು ಹಿಡಿದವರನ್ನು ಪತ್ತೆ ಹಚ್ಚಿದ ಪೊಲೀಸರು- ಮುಂದೇನಾಯಿತು?!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts