

ನವದೆಹಲಿ: ನ್ಯಾಯಾಲಯದೊಳಗೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವಂತಿಲ್ಲ. ಆದರೆ ಈ ಕೋರ್ಟ್ ಒಳಗೆ ಮಾತ್ರ ಆತಂಕಕಾರಿ ಘಟನೆ ನಡೆದಿದ್ದು ಮಹಿಳೆ ಒಬ್ಬರ ಮೇಲೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆದಿದೆ.
ಈ ಘಟನೆ ದೆಹಲಿಯ ಸಾಕೇತ್ ಕೋರ್ಟ್‌ನಲ್ಲಿ ನಡೆದಿದ್ದು ಇಂದು ಶುಕ್ರವಾರ (ಏ.21) ನಾಲ್ಕು ಸುತ್ತಿನ ಗುಂಡಿನ ದಾಳಿಗೆ ಮಹಿಳೆಯೊಬ್ಬರು ತುತ್ತಾಗಿದ್ದಾರೆ.
ಸದ್ಯ ದೆಹಲಿ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)