More

    VIDEO: ಮಹಿಳೆಗೆ ಮುದ್ದಾಗಿ ಕೃತಜ್ಞತೆ ಸಲ್ಲಿಸಿದ ಪೆಂಗ್ವಿನ್​ ಪಕ್ಷಿ..ತಮಾಷೆಯಲ್ಲ ಅದರ ಮುಗ್ಧತೆ ನೀವೂ ನೋಡಿ…

    ಒಂದು ಮುದ್ದಾದ ಪೆಂಗ್ವಿನ್​ ಪಕ್ಷಿಗೆ ಸಂಬಂಧಪಟ್ಟ ವಿಡಿಯೋ ನೋಡಿದ ನೆಟ್ಟಿಗರು ಸಿಕ್ಕಾಪಟೆ ಖುಷಿಯಾಗಿದ್ದಾರೆ. ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದು ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಅವರು. ಮುದ್ದಾದ ಪೆಂಗ್ವಿನ್​ ಮಹಿಳೆಯೋರ್ವರಿಗೆ ಮೌನವಾಗಿಯೇ ಕೃತಜ್ಞತೆ ಸಲ್ಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

    ಮಹಿಳೆಯೋರ್ವರು ಚಿಕ್ಕದಾದ ಪೆಂಗ್ವಿನ್​ ಪಕ್ಷಿಯನ್ನು ತಂದು ಸಮುದ್ರದ ಬಳಿ ಬಿಡುತ್ತಾರೆ. ಅವರ ಕೈಯಿಂದ ಸಾಗರದ ಅಲೆಗಳ ಬಲಿ ಕಾಲಿಡುತ್ತಿದ್ದಂತೆ ಪೆಂಗ್ವಿನ್​ ಫುಲ್​ ಖುಷಿಯಾಗುತ್ತದೆ. ಮಹಿಳೆಯತ್ತ ನೋಡಿ, ತನ್ನ ಮುಂದಿನ ರೆಕ್ಕೆಗಳನ್ನು ಎತ್ತಿ, ಮೌನವಾಗಿಯೇ ಕೃತಜ್ಞತೆ ಸಲ್ಲಿಸುತ್ತದೆ. ಇದನ್ನೂ ಓದಿ: ದೆಹಲಿಯಲ್ಲಿ ಶೀಘ್ರವೇ ಪ್ಲಾಸ್ಮಾ ಬ್ಯಾಂಕ್​ ನಿರ್ಮಾಣ: ಮೃತ ವೈದ್ಯನ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ

    ಈ ಪುಟ್ಟ ಹಕ್ಕಿಗೆ ಗಾಯವಾಗಿತ್ತು. ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಮಹಿಳೆ ಅದನ್ನು ತಂದು ಸಮುದ್ರದ ಅಂಚಿನಲ್ಲಿ ಬಿಟ್ಟರು. ಪೆಂಗ್ವಿನ್​ ಸಮುದ್ರದತ್ತ ಸಾಗಿ ಕಣ್ಮರೆಯಾಗುವುದಕ್ಕೂ ಮೊದಲು ತನ್ನನ್ನು ರಕ್ಷಿಸಿ, ಬಳಿಕ ಇಲ್ಲಿ ಕರೆದುಕೊಂಡು ಬಂದು ಬಿಟ್ಟ ಮಹಿಳೆಗೆ ಪ್ರೀತಿಯಿಂದ ಥ್ಯಾಂಕ್ಸ್​ ಹೇಳಿತು ಎಂದು ಸುಸಾಂತಾ ನಂದಾ ಅವರು ಕ್ಯಾಪ್ಷನ್ ಬರೆದಿದ್ದಾರೆ.

    ಇದು 30 ಸೆಕೆಂಡ್​ಗಳ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್​ ಆಗುತ್ತಿದೆ. ಇದನ್ನು ನೋಡಿ ಕಣ್ಣಲ್ಲಿ ನೀರು ಬಂತು. ಎಂಥ ಸಭ್ಯ ಜೀವಿ ಎಂದು ನೆಟ್ಟಿಗರೋರ್ವರು ಕಾಮೆಂಟ್​ ಬರೆದಿದ್ದಾರೆ.  ಇದು ಎರಡು ವರ್ಷ ಹಳೆಯ ವಿಡಿಯೋ. ಮೊದಲ ಬಾರಿಗೆ 2017ರಲ್ಲಿ ಫೇಸ್​ಬುಕ್ ಪೇಜ್​ವೊಂದರಲ್ಲಿ ಶೇರ್​ ಆಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts