More

    ಡಿಗ್ರಿಯೇ ಇಲ್ಲದೆ ವರ್ಷಗಳಿಂದ ವಕೀಲಳ ಸೋಗು ಹಾಕಿದ್ದ ಮಹಿಳೆ!

    ಅಲಪುಜಾ : ಸುಮಾರು ನಾಲ್ಕು ವರ್ಷಗಳಿಂದ ಸರಿಯಾದ ಡಿಗ್ರಿಯೇ ಇಲ್ಲದೆ ವಕಾಲತ್ತು ನಡೆಸುತ್ತಿದ್ದ ಮಹಿಳೆಯೊಬ್ಬಳ ಮೇಲೆ ಕೇರಳ ಪೊಲೀಸರು ವಂಚನೆ, ಫೋರ್ಜರಿ ಮತ್ತಿತರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲಪುಜಾದ ಕೋರ್ಟುಗಳಲ್ಲಿ 2018 ರಿಂದ ವಕೀಲಳೆಂಬಂತೆ ಸೋಗುಹಾಕಿದ್ದ ಸೆಸ್ಸಿ ಗ್ಸೇವಿಯರ್ ಎಂಬ ಈ ಮಹಿಳೆ ಇದೀಗ ಪೊಲೀಸರಿಂದ ತಲೆಮರೆಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

    ಆರೋಪಿ ಸೆಸ್ಸಿ, 2018 ರಲ್ಲಿ ಅಲಪುಜಾದ ಬಿ.ಶಿವದಾಸ್ ಎಂಬ ಹಿರಿಯ ವಕೀಲರ ಆಫೀಸಿಗೆ ಕಾನೂನು ವಿದ್ಯಾರ್ಥಿನಿ ಎಂದು ಹೇಳಿಕೊಂಡು ಇಂಟರ್ನ್​ ಆಗಿ ಸೇರಿಕೊಂಡಳು. ಕೋರ್ಟ್​ ಕೆಲಸ ಮಾಡಲು ಆರಂಭಿಸಿದ ಆಕೆ ನಂತರದಲ್ಲಿ ತನ್ನ ಎಲ್​ಎಲ್​ಬಿ ಕೋರ್ಸ್​ ಮುಗಿಯಿತೆಂದು ಹೇಳಿ ಮಾರ್ಚ್​ 2019 ರಲ್ಲಿ ಕೇರಳ ಬಾರ್​ ಕೌನ್ಸಿಲ್​ನಲ್ಲಿ ನೋಂದಣಿ ಮಾಡಿಸಿದ್ದಾಗಿ ರೋಲ್ ನಂಬರ್ ಒದಗಿಸಿದ್ದಳು. ಆಗಿನಿಂದ ವಕೀಲಳಾಗಿಯೇ ಕಾರ್ಯನಿರ್ವಹಿಸುತ್ತಿರುವ ಆಕೆ ಹಲವು ಮೊಕದ್ದಮೆಗಳಲ್ಲಿ ವಕಾಲತ್​ನಾಮೆ ಸಲ್ಲಿಸಿದ್ದಾಳೆ. ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಅಲಪುಜಾ ವಕೀಲರ ಸಂಘದ ಚುನಾವಣೆಯಲ್ಲೂ ಭಾಗವಹಿಸಿದ ಆಕೆ, ಸಂಘದ ಲೈಬ್ರರಿಯನ್ ಆಗಿ ಆಯ್ಕೆ ಆಗಿದ್ದಳು ಎನ್ನಲಾಗಿದೆ.

    ಇದನ್ನೂ ಓದಿ: ಕ್ಲಬ್​ಹೌಸ್​ನಿಂದ ಲಕ್ಷಾಂತರ ಜನರ ಡೇಟಾ ಲೀಕ್?! ಸಂಸ್ಥೆ ಕೊಟ್ಟ ಉತ್ತರವೇನು?

    ಜುಲೈ 15 ರಂದು ಸಂಘಕ್ಕೆ ಬಂದ ಅನಾಮಧೇಯ ಪತ್ರದಿಂದಾಗಿ ಈಕೆಯ ಅಸಲಿಯತ್ತು ಹೊರಬಂತು. ಸೆಸ್ಸಿ ವಕೀಲಳಾಗುವ ಶೈಕ್ಷಣಿಕ ಅರ್ಹತೆಯನ್ನೇ ಹೊಂದಿಲ್ಲ, ಆಕೆ ನಕಲಿ ನೋಂದಣಿ ಸಂಖ್ಯೆ ನೀಡಿದ್ದಾಳೆ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಸಂಘಕ್ಕೆ ತಿಳಿದುಬಂದ ವಿಷಯವೇನೆಂದರೆ, ಆಕೆ ತಿರುವನಂತಪುರಂನ ವಕೀಲರೊಬ್ಬರ ಸದಸ್ಯತ್ವ ಸಂಖ್ಯೆ ಮತ್ತಿತರ ದಾಖಲಾತಿಗಳನ್ನು ಒದಗಿಸಿದ್ದಳು ಎಂಬುದು!

    ಜುಲೈ 17 ರಂದು ಆಕೆಯ ಸದಸ್ಯತ್ವವನ್ನು ರದ್ದುಗೊಳಿಸಿದ ಅಲಪುಜಾ ವಕೀಲರ ಸಂಘ, ಪೊಲೀಸರಿಗೆ ದೂರು ಸಲ್ಲಿಸಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಸೆಸ್ಸಿ, ತನ್ನ ಮೇಲೆ ಪೊಲೀಸರು ಜಾಮೀನುರಹಿತ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದ ನಂತರ ಕೋರ್ಟಿನಿಂದಲೇ ಪಲಾಯನ ಮಾಡಿದಳು. ಪೊಲೀಸರು ಜುಲೈ 18 ರಿಂದ ಆಕೆಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ನಾಯಕತ್ವ ಬದಲಾಯಿಸಿದರೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ: ಮಠಾಧೀಶರ ಸಮಾವೇಶದಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ

    ನಡುರಾತ್ರಿ ಪ್ರೇಯಸಿಯ ಮನೆಗೆ ಹೋಗಿ ಸಿಕ್ಕಿಬಿದ್ದ ಯುವಕ; ಮುಂದಾದದ್ದು ಭಾರಿ ದುರಂತ

    ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts