ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

pvsindhu
Published on

ಟೋಕಿಯೋ : ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಭಾರತದ ಪಿ.ವಿ.ಸಿಂಧು ಅವರು ಮೊದಲ ಗೆಲುವು ಸಾಧಿಸಿದ್ದಾರೆ. ವುಮೆನ್ಸ್​ ಸಿಂಗಲ್ಸ್​ ಬ್ಯಾಡ್ಮಿಂಟನ್ ಗ್ರೂಪ್​ ಜೆ ಪಂದ್ಯದಲ್ಲಿ ಇಸ್ರೇಲ್​ನ ಕ್ಸೇನಿಯ ಪೊಲಿಕರ್ಪೋವ ಎಂಬುವರನ್ನು ನೇರ ಆಟಗಳಲ್ಲಿ ಪರಾಜಯಗೊಳಿಸಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ ವರ್ಲ್ಡ್​ ಚಾಂಪಿಯನ್ ಆದ ಸಿಂಧು ಅವರು ಪೊಲಿಕರ್ಪೋವ ವಿರುದ್ಧ ಸುಲಲಿತವಾಗಿ 21-7 ಮತ್ತು 21-10 ಸ್ಕೋರ್​ನೊಂದಿಗೆ ಗೆಲುವು ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಹಾಂಗ್​ಕಾಂಗ್​ನ ಚೆಯುಂಗ್​ ಗಾನ್ ಯಿ ಅವರ ವಿರುದ್ಧ ಸೆಣೆಸಲಿದ್ದಾರೆ. ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು ಅವರು ಈ ಬಾರಿಯೂ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದು ತರುತ್ತಾರೆ ಎಂಬ ಅಪೇಕ್ಷೆಗಳಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net