ಲಖನೌ: ಮುಂಬೈಗೆ ವಿಮಾನ ಹತ್ತಬೇಕಿದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನಯಾನ ಸಿಬ್ಬಂದಿಯನ್ನು ಕಚ್ಚಿ ಹಲ್ಲೆ ನಡೆಸಿರುವ ಘಟನೆ ಲಖನೌ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಟೇಕಾಫ್ ಆಗಬೇಕಿದ್ದ QP 1525 ವಿಮಾನದ ಪ್ರಯಾಣಿಕರು ಫ್ಲೈಟ್ ಹತ್ತುವಾಗ ಈ ಘಟನೆ ನಡೆದಿದೆ. ಆಕೆಯ ವಿರುದ್ಧ ಲಖನೌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ; ಸಿಎಂ ಅರವಿಂದ್ ಕೇಜ್ರಿವಾಲ್ಗೆ ನ್ಯಾಯಾಂಗ ಬಂಧನ ವಿಸ್ತರಣೆ
ಆ ಮಹಿಳೆ ವಿಮಾನವನ್ನು ಹತ್ತಿದ ಬಳಿಕ ಸಹ ಪ್ರಯಾಣಿಕರೊಂದಿಗೆ ಕೂಗಿ ಜಗಳವಾಡಿದ್ದಾಳೆ. ಅದನ್ನು ನೋಡಿದ ಏರ್ಲೈನ್ಸ್ ಸಿಬ್ಬಂದಿ ಜಗಳವಾಡಬೇಡಿ, ಸುಮ್ಮನಿರಿ ಎಂದು ಸಲಹೆ ನೀಡಿದ್ದರಿಂದ ಹಿಂದೆ ಸರಿದಿದ್ದಾರೆ. ಆದರೆ, ಆಕೆ ಮತ್ತೆ ಜಗಳ ಆರಂಭಿಸಿದ ಬಳಿಕ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಏರ್‌ಲೈನ್ ಗ್ರೌಂಡ್ ಸಿಬ್ಬಂದಿ ಬಂದು ಆಕೆಯನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.
ವಿಮಾನದಿಂದ ಇಳಿಯುವಾಗ ಗ್ರೌಂಡ್ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಿ ಅವರ ಕೈಯನ್ನು ಕಚ್ಚಿ, ಹಲ್ಲೆ ಮಾಡಿದ್ದಾರೆ. ಇದಾದ ನಂತರ ಘಟನಾ ಸ್ಥಳಕ್ಕಾಗಮಿಸಿದ ಸಿಐಎಸ್‌ಎಫ್ ಆಕೆಯನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಗ್ರಾ ಮೂಲದವರಾಗಿದ್ದು ಮುಂಬೈನಲ್ಲಿ ನೆಲೆಸಿದ್ದಾರೆ. ಆಕೆ ತನ್ನ ಸಹೋದರಿಯನ್ನು ಭೇಟಿಯಾಗಲು ಲಖನೌಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಾದ ನಂತರ ಆಕೆಯನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್)