ಗಂಡನ ಎದುರೇ ಸೋದರಳಿಯನನ್ನು ಮದುವೆಯಾದ ಮಹಿಳೆ!: ವಿಡಿಯೋ ವೈರಲ್​​ | Marries

dk - 2025-06-23T155253.499
Published on

Marries: ತನ್ನ ಗಂಡ ಹಾಗೂ ಮಗಳ ಮುಂದೆಯೇ ಮಹಿಳೆಯೊಬ್ಬಳು ತನ್ನ ಸೋದರಳಿಯನ್ನು ಮದುವೆಯಾದ ಅಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಬಿಹಾರದ ಜಮುಯಿ ಜಿಲ್ಲೆಯ ಸಿಖೇರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆ ಮಹಿಳೆಯನ್ನು ಆಯುಷಿ ಕುಮಾರಿ ಎಂದು ಗುರುತಿಸಲಾಗಿದೆ. ಅವರು ತಮ್ಮ ಅಳಿಯನನ್ನು ದೇವಸ್ಥಾನದಲ್ಲಿ ವಿವಾಹವಾದರು, ನಂತರ ಮಗಳು ಮತ್ತು ಪತಿಯನ್ನು ಬಿಟ್ಟು ಹೋಗಿದ್ದಾರೆ. ಶುಕ್ರವಾರ (ಜೂ.20ರಂದು) ಸಂಜೆ ವಿವಾಹ ನಡೆದಿದೆ ಎಂದು ವರದಿ ಉಲ್ಲೇಖಿಸಿವೆ.

ವರದಿಗಳ ಪ್ರಕಾರ, ಆಯುಷಿ 2021ರಲ್ಲಿ ಅದೇ ಗ್ರಾಮದಲ್ಲಿ ವಿಶಾಲ್ ದುಬೆ ಅವರನ್ನು ವಿವಾಹವಾದರು. ಅವರಿಗೆ ಮೂರು ವರ್ಷದ ಮಗಳಿದ್ದಾಳೆ. ಆದಾಗ್ಯೂ, ಆಯುಷಿ ಗ್ರಾಮದ ಸಂಬಂಧಿ(ಸೋದರಳಿಯ) ಸಚಿನ್ ದುಬೆ ಅವರೊಂದಿಗೆ ರಹಸ್ಯ ಸಂಬಂಧ ಹೊಂದಿದ್ದಾಳೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ..?

ಜೂನ್ 15 ರಂದು ಆಯುಷಿ ಸಚಿನ್ ಜತೆ ಓಡಿಹೋದಾಗ ಅವರ ಪ್ರೇಮ ಪ್ರಕರಣ ಬೆಳಕಿಗೆ ಬಂದಿತು. ಆಕೆಯ ಪತಿ ಸದರ್ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಆದರೆ, ಆಯುಷಿ ಶೀಘ್ರದಲ್ಲೇ ಜಮುಯಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಮತ್ತು ತನ್ನ ಮಗಳನ್ನು ಉಳಿಸಿಕೊಳ್ಳಲು ನಿರಾಕರಿಸಿದರು.ಇದೀಗ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net