

ನವದೆಹಲಿ: ನಾವು ಈಗಾಗಲೇ ತನ್ನನ್ನೇ ಮದುವೆಯಾದ ವಿಚಿತ್ರ ಘಟನೆಯನ್ನು ಗುಜರಾತ್ನಲ್ಲಿ ನೋಡಿದ್ದೇವೆ. ಈ 25 ವರ್ಷದ ಯುವತಿ ಮಾತ್ರ ತನ್ನನ್ನು ತಾನೇ ಮದುವೆಯಾಗಿದ್ದು, 24 ಗಂಟೆಯಲ್ಲೇ ವಿಚ್ಛೇದನ ವನ್ನೂ ತನಗೆ ತಾನೇ ನೀಡಿಕೊಂಡಿದ್ದಾಳೆ.
ಸೋಫಿ ಮೌರ್ ಎಂಬ ಹೆಸರಿನ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಈ ಸುದ್ದಿಯನ್ನು ಬಿಳಿಗೌನ್ ತೊಟ್ಟು ತನ್ನ ಫೋಟೋ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ. ಅದಲ್ಲದೇ, ಫೆ.20ರಂದು ಪೋಸ್ಟ್ ಮಾಡಿ “ಇಂದು ನನ್ನ ಜೀವನದಲ್ಲಿ ನಾನೇ ನಂಬಲಾರದ ದಿನ ನಾನು ನನ್ನನ್ನೇ ಮದುವೆಯಾಗಲು ಉಡುಪನ್ನು ಖರೀದಿಸಿ ಕೈಯಾರೆ ಒಂದು ಕೇಕ್ ಮಾಡಿ ಕತ್ತರಿಸಿದೆ. ಈ ಮೂಲಕ ನನ್ನನ್ನು ನಾನು ಮದುವೆ ಮಾಡಿಕೊಂಡೆ” ಎಂಬ ಕ್ಯಾಪ್ಟನ್ನಿಂದ ತಮ್ಮ ಫಾಲೋವರ್ಸ್ ಗಮನವನ್ನು ಸೆಳೆದಿದ್ದರು. ನಿನ್ನೆ ವಿಚ್ಛೇದನದ ಮಾಹಿತಿಯನ್ನೂ ನೀಡಿದ್ದಾರೆ. (ಏಜೆನ್ಸೀಸ್)