ದೇವಸ್ಥಾನಕ್ಕೆಂದು ಬೆಳ್ಳಂಬೆಳಗ್ಗೆಯೇ ಮನೆಬಿಟ್ಟ ಮಹಿಳೆ ಕೇವಲ 2 ಗಂಟೆಯಲ್ಲಿ ಕುಟುಂಬಕ್ಕೆ ಕೊಟ್ಟಳು ಶಾಕ್​!

Woman
Published on

ಆಲಪ್ಪುಳ (ಕೇರಳ): ದೇವಸ್ಥಾನಕ್ಕೆಂದು ಮನೆಯಿಂದ ಹೊರಟ ಮಹಿಳೆಯೊಬ್ಬಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಆಲಪ್ಪುಳದ ಥಾಮರಕ್ಕುಳಂ ಬಳಿಯ ಪುತುಚಿರಾದಲ್ಲಿ ನಡೆದಿದೆ.

ವಿಜಯಲಕ್ಷ್ಮೀ (33) ಮೃತ ದುರ್ದೈವಿ. ಥಾರಮಕ್ಕುಳಂ ನಿವಾಸಿ ಪ್ರದೀಪ್​ ಎಂಬುವರ ಪತ್ನಿ. ವಿಜಯಲಕ್ಷ್ಮೀ ಗುರುವಾರ ಬೆಳಗ್ಗೆ 5.30ಕ್ಕೆ ಮನೆಯಿಂದ ಹೊರಟಳು. ಹೋಗುವ ಮುನ್ನ ಚಿರಾಕ್ಕಲ್​ನಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿರುವುದಾಗಿ ತಿಳಿಸಿದಳು. ಆದರೆ, ಯಾವಾಗ ಸರಿಯಾದ ಸಮಯಕ್ಕೆ ಮನೆಗೆ ಮಹಿಳೆ ಹಿಂದಿರುಗಲಿಲ್ಲ ಆಕೆಯ ಕುಟುಂಬ ಹುಡುಕಾಡಲು ಆರಂಭಿಸಿತು.

ದೇವಸ್ಥಾನದ ಮುಂದೆ ಸ್ಕೂಟರ್​ ನಿಲ್ಲಿಸಿ, ಕೊಳವೊಂದರ ಬಳಿ ಚಪ್ಪಲಿ ಬಿಟ್ಟಿರುವುದು ಪತ್ತೆಯಾಯಿತು. ಅಲ್ಲದೆ, ಅದೇ ದಿನ 7.30ರ ಸುಮಾರಿಗೆ ವಿಜಯಲಕ್ಷ್ಮೀ ಮೃತದೇಹವು ಸಹ ಕೊಳದಲ್ಲಿ ಪತ್ತೆಯಾಯಿತು.

ವಿಜಯಲಕ್ಷ್ಮೀ ಕಳೆದ 4 ವರ್ಷಗಳಿಂದ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನೇಕ ಸರ ಎಗರಿಸಿದ ಪ್ರಕರಣಗಳಲ್ಲಿ ಪ್ರದೀಪ್​ನನ್ನು ಪೊಲೀಸರು ಬಂಧಿಸಿದ ನಂತರ ವಿಜಯಲಕ್ಷ್ಮೀ ತನ್ನ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದಳು. ಪ್ರದೀಪ್​ನನ್ನು ಮತ್ತೆ ಪೊಲೀಸರು ಸರಗಳ್ಳತನ ಪ್ರಕರಣದಲ್ಲಿ ಬಂಧಿಸಿದಾಗ ಕಳೆದ ತಿಂಗಳಷ್ಟೇ ತವರಿಗೆ ಮರಳಿದ್ದಳು.

ಆಲಪ್ಪುಳದ ಪವುಂಬಾದಲ್ಲಿರುವ ತನ್ನ ಮನೆಯಲ್ಲಿ ವಿಜಯಲಕ್ಷ್ಮೀ ಉಳಿದುಕೊಂಡಿದ್ದಳು. ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net