ಈ ಸುಂದರಿಗೆ ಇದ್ದಾರೆ ಬರೋಬ್ಬರಿ 7,000 ಮಂದಿ ಬಾಯ್‌ಫ್ರೆಂಡ್ಸ್‌!

Woman Has 7000 Online Boyfriends In Real Life
Published on

ನವದೆಹಲಿ: ಒಂದು ಹುಡುಗಿಗೆ ಒಬ್ಬರು ಬಾಯ್​ ಫ್ರೆಂಡ್​​ ಇರುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬಾಕೆಗೆ ಇರೋದು ಬರೋಬ್ಬರಿ 7,000 ಬಾಯ್‌ಫ್ರೆಂಡ್ಸ್‌. ಇಷ್ಟೊಂದು ಜನ ಯಾಕೆ ಎನ್ನುವ ಪ್ರಶ್ನೆ ನಿಮಗೆ ಬಂದಿದ್ದರೆ ಈ ಸುದ್ದಿ ಓದಿ...

25 ವರ್ಷದ ನಲಾ ರೇ ಎಂಬಾಕೆ ತನಗೆ 7,000 ಮಂದಿ ಆನ್‌ಲೈನ್ ಬಾಯ್‌ಫ್ರೆಂಡ್‌ ಇದ್ದಾರೆ. ಕೆಟ್ಟ ಸಂಬಂಧದಿಂದ ಉಂಟಾದ ನೋವಿಂದ ಹೊರಬರಲು ನಾನು ಹೊಸ ಗಳೆಯರನ್ನು ಹುಡುಕಲು ಆರಂಭಿಸಿದೆ. ಕ್ರಮೇಣ ಹೊಸ ಗೆಳೆಯರು ಇಲ್ಲದೆ ನನಗೆ ಬದುಕುವುದೇ ಕಷ್ಟ ಎಂಬಂತಾಗಿದೆ. ಅವರೊಂದಿಗಿನ ತನ್ನ ಸಂಬಂಧವು ನಿಜ ಜೀವನದ ಡೇಟಿಂಗ್‌ಗಿಂತ ಉತ್ತಮವಾಗಿದೆ.

ಡೇಟಿಂಗ್ ಮಾಡಲು ನಾನು ಸರಿಯಾದ ಆಯ್ಕೆ ಆಗಿದ್ದೇನೆ. ಯಾಕೇಂದರೆ ನಾನು ತುಂಬಾ ಸುಂದರವಾಗಿದ್ದೇನೆ. ಬೇಗನೇ ಎಲ್ಲರ ಮನಸ್ಸನ್ನು ಅರಿತುಕೊಳ್ಳುತ್ತೇನೆ. ಹೀಗಾಗಿಯೇ ನನಗೆ ಹೆಚ್ಚು ಜನರು ಬಾಯ್‌ಫ್ರೆಂಡ್ಸ್ ಇದ್ದಾರೆ. ನನಗೆ ನನ್ನ ಸೌಂದರ್ಯ ಅಥವಾ ಹಣವನ್ನು ನೋಡದೆ ಮದುವೆಯಾಗುವವರು ಬೇಕಾಗಿದ್ದಾರೆ. ಅಂಥವರನ್ನು ಹುಡುಕಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾಳೆ.

ಪ್ರತಿದಿನ ಬೆಳಗ್ಗೆ ನಾನು ನನ್ನ ಗೆಳೆಯರಿಗೆ ಏನನ್ನಾದರೂ ಕಳುಹಿಸುತ್ತೇನೆ. ಆ ನಂತರ ಅವರಲ್ಲಿ ಕೆಲವರು ಉತ್ತರಿಸುತ್ತಾರೆ ಮತ್ತು ನಾವು ಸ್ವಲ್ಪ ಮಾತನಾಡುತ್ತೇವೆ. ಈ ಕಾಂಟ್ಯಾಕ್ಟ್‌ಗಳ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ ಎಂದು ಯುವತಿ ತಿಳಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net