ಕೊಪ್ಪಳ ಬಸ್‌ಗೆ ಕಲ್ಲೆಸೆದ ಮಹಿಳೆಗೆ ಐದು ಸಾವಿರ ರೂಪಾಯಿ ದಂಡ!

koppla women
Published on

-ಬಸ್ ನಿಲ್ಲಿಸದ ಡ್ರೈವರ್ ಬಸ್​​ಗೆ ಕಲ್ಲೆಸೆದ ಮಹಿಳೆ

ಕೊಪ್ಪಳ: ಬಸ್​​ನ್ನು ಡ್ರೈವರ್​ ನಿಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಕೋಪಗೊಂಡು ಎಕ್ಸ್​​ಪ್ರೆಸ್​​ ಬಸ್​ಗೆ ಕಲ್ಲೆಸೆದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ.

ಕೊಪ್ಪಳದಿಂದ-ಹೊಸಪೇಟೆಗೆ ಎಕ್ಸ್​​ಪ್ರೆಸ್ ಬಸ್​​ ಹೊರಟಿತ್ತು. ಈ ವೇಳೆ ಮಹಿಳೆ ಬಸ್ ನಿಲ್ಲಿಸದೆ ಡ್ರೈವರ್ ಹೋಗಿದ್ದಾನೆ. ಆಗ ಮಹಿಳೆ ಬಸ್​​ಗೆ ಕಲ್ಲೆಸೆದಿದ್ದಾಳೆ. ಕಲ್ಲು ಎಸೆದ ಹಿನ್ನೆಲೆ ಡ್ರೈವರ್ ಕಂ ಕಂಡಕ್ಟರ್ ಪ್ಯಾಸೆಂಜರ್ ಸಮೇತ ಪೊಲೀಸ್ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್ ತಂದು ನಿಲ್ಲಿಸಿದ್ದಾನೆ.

ಬಸ್ ‌ನಿಲ್ಲಿಸದ ಕೋಪಕ್ಕೆ ಲಕ್ಷ್ಮಿ ಎನ್ನುವ ಮಹಿಳೆ ಕಲ್ಲು ತೂರಿದ್ದಾಳೆ. ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಿನ್ನೆ ಸಾಯಂಕಾಲ ಈ ಘಟನೆ ನಡೆದಿದೆ. ಬಸ್​​ ಡ್ರೈವರ್ ಮುತ್ತಪ್ಪ ಬಸ್ ಪೊಲೀಸ್ ಠಾಣೆಗೆ ತಂದು ದೂರು ನೀಡಲು ಮುಂದಾಗಿದ್ದಾರೆ.

ಪಾಪನಳ್ಳಿ ನಿವಾಸಿ ಲಕ್ಷ್ಮಿ. ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದಳು. ಲಕ್ಷ್ಮಿ ಜತೆ ಇನ್ನೋರ್ವ ಮಹಿಳೆ ಇಬ್ಬರು ಹೆಣ್ಮಕ್ಕಳು ಇದ್ದರು. ಹುಲಿಗಿ ದರ್ಶನ ಪಡೆದು ಲಿಂಗಾಪುರ ಬಳಿ ಬಸ್ ಗಾಗಿ ಕಾದು ಕುಳಿತಿದ್ದಳು ಲಕ್ಷ್ಮಿ. ಮಳೆಯಲ್ಲಿ ನಾಲ್ಕೈದು ತಾಸು ಬಸ್​​ಗಾಗಿ ಕಾದು ಕುಳಿತಿದ್ದ ಲಕ್ಷ್ಮಿಗೆ ಕೋಪ ಬಂದಿದೆ. ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್​​ಗೆ ಕಲ್ಲೆಸೆದಿದ್ದಾಳೆ. KA-35, F-252 ಕೊಪ್ಪಳ ಬಸ್ ಗ್ಲಾಸ್ ಡ್ಯಾಮೇಜ್ ಆಗಿದೆ.

ಬಸ್ ಡ್ಯಾಮೇಜ್ ಹಿನ್ನೆಲೆ 5000ರೂ, ದಂಡ ಕಟ್ಟಿ. ಇಲ್ಲವಾದಲ್ಲಿ ಎಫ್​​ಐಆರ್​​ ದಾಖಲು ಮಾಡುವುದಾಗಿ ಲಕ್ಷ್ಮಿಗೆ ಬಸ್ ಡಿಪೋ ಮ್ಯಾನೇಜರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿದ ಲಕ್ಷ್ಮಿ , ಕೊನೆಗೆ 5000 ರೂ. ದಂಡ ಕಟ್ಟಿ ಅದೇ ಬಸ್​​ನಲ್ಲಿ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net