ಪುರುಷರೇ, ಗಮನ ಕೊಡಿ.. ಹೀಗೆ ಪ್ರಪೋಸ್​ ಮಾಡಬೇಡಿ! ಕೇಕ್ ಜತೆ ಉಂಗುರವನ್ನೇ ತಿಂದಳು..Woman Eats Gold Ring

Woman Eats Gold Ring
Published on

ಚೀನಾ: (Woman Eats Gold Ring ) ನೀವು ಇಷ್ಟಪಡುವ ಹುಡುಗಿಗೆ ಉಂಗುರ ಕೊಟ್ಟು ಪ್ರಪೋಸ್ ಮಾಡುವುದು ಸಾಮಾನ್ಯ. ಅವರು ಈ ಪ್ರಸ್ತಾಪವನ್ನು ಯೋಜಿಸುತ್ತಾರೆ ಮತ್ತು ಅನಿರೀಕ್ಷಿತ ಸ್ಥಳದಲ್ಲಿ, ಅನಿರೀಕ್ಷಿತ ರೀತಿಯಲ್ಲಿ ಅವಳನ್ನು ಅಚ್ಚರಿಗೊಳಿಸುತ್ತಾರೆ. ಚೀನಾದ ವ್ಯಕ್ತಿಯೊಬ್ಬ ತಾನು ಇಷ್ಟಪಟ್ಟ ಹುಡುಗಿಗೆ ಅಚ್ಚರಿಯ ಪ್ರಸ್ತಾಪವನ್ನು ಯೋಜಿಸಿದ್ದ. ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಬಹುತೇಕ ಉಂಗುರವನ್ನೇ ತಿಂದಿದ್ದಾಳೆ.

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಲಿಯು ಎಂಬ ಮಹಿಳೆ ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. "ಎಲ್ಲ ಪುರುಷರೇ, ಗಮನ ಕೊಡಿ..ಆಹಾರದಲ್ಲಿ ಎಂದಿಗೂ ಪ್ರಪೋಸಲ್ ರಿಂಗ್ ಅನ್ನು ಮರೆಮಾಡಬೇಡಿ!" ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಇದು ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಸ್ವಲ್ಪ ಬೇರೆ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ,  ರೆಸ್ಟೋರೆಂಟ್​ವೊಂದರಲ್ಲಿ ಕುಳ್ಳಿರಿಸಿ, ಕೇಕ್​ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ, ಆಕೆ ತಿನ್ನುವಾಗ ಕೈಯಲ್ಲಿ ಉಂಗುರ ಸಿಗುತ್ತೆ ಆಕೆ ಖುಷಿಯಿಂದ ತನ್ನನ್ನು ಒಪ್ಪಿಕೊಳ್ಳುತ್ತಾಳೆ ಎಂದೆಲ್ಲಾ ಆತ ಕನಸು ಕಂಡಿದ್ದ ಆದರೆ ಆಗಿದ್ದೇ ಬೇರೆ, ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಬಹುತೇಕ ಉಂಗುರವನ್ನೇ ತಿಂದಿದ್ದಾಳೆ.

ಆಕೆಯ ಹಲ್ಲಿಗೆ ಏನೋ ಸಿಕ್ಕಿದಂತಾಗಿತ್ತು ಆಗ ಆಕೆ, ಕೇಕ್​ನ ಗುಣಮಟ್ಟವೇ ಸರಿಯಿಲ್ಲದಿರಬಹುದು ಎಂದು ಭಾವಿಸಿದ್ದ ಬೇಕರಿಗೆ ದೂರು ಕೊಡಬೇಕೆಂದುಕೊಂಡಿದ್ದಳು. ಆ ವಿಚಾರವನ್ನು ಆಕೆ ಗೆಳೆಯನ ಬಳಿಯೂ ಹೇಳಿಕೊಂಡಳು. ಆಕೆ ಆ ಉಂಗುರವನ್ನು ಹಲ್ಲಿನಲ್ಲಿ ಕಚ್ಚಿದ್ದರಿಂದ ಅದು ಎರಡು ತುಂಡುಗಳಾಗಿ ಬಿದ್ದಿತ್ತು ಎಂದು ತೋರಿಸಿದ್ದಾಳೆ. ಇದನ್ನು ಕೇಳಿದ ಯುವಕ  ಇದು ನಾನು ನಿನಗೆ ಪ್ರಪೋಸ್ ಮಾಡಲು ತಂದ ಉಂಗುರ ಎಂದು ಮೃದುವಾಗಿ ಹೇಳಿದ.

ಈ ಘಟನೆಯಿಂದ ಇಬ್ಬರೂ ಸ್ವಲ್ಪ ಮುಜುಗರಕ್ಕೊಳಗಾದರು. ಇಷ್ಟೆಲ್ಲಾ ನಡೆದರೂ ಕೂಡ ಬಳಿಕ ಆಕೆ ತನ್ನ ಗೆಳೆಯನನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಆದರೆ ಈ ಪ್ರಪೋಸ್​ ಮಾಡುವ ವಿಧಾನ ತುಂಬಾ ಅಪಾಯಕಾರಿಯಾಗಿತ್ತು ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net