ನೀರಿನಲ್ಲಿ ತೇಲುತ್ತಿತ್ತು ಮಹಿಳೆಯ ದೇಹ; ರಕ್ಷಿಸಲು ಹೋದವರಿಗೆ ಕಾದಿತ್ತು ಬಿಗ್ ಶಾಕ್!

dead
Published on

ಟೋಕಿಯೋ: ನೀರಿನಲ್ಲಿ ತೇಲುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹೋದ ರಕ್ಷಣಾ ಸಿಬ್ಬಂದಿಗೆ ದೊಡ್ಡದೊಂದು ಶಾಕ್ ಆಗಿರುವ ಘಟನೆ ಜಪಾನ್​ನಲ್ಲಿ ನಡೆದಿದೆ. ಈ ವಿಚಾರವಾಗಿ ಅನೇಕರು ಟ್ರೋಲ್ ಮಾಡುತ್ತಿದ್ದರೆ ಇನ್ನು ಅನೇಕರು ಜನರ ತಪ್ಪಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಜಪಾನ್​ನ ನದಿಯೊಂದಲ್ಲಿ ಹೆಣ್ಣೊಬ್ಬಳ ದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಪೊಲೀಸರು, ಅಗ್ನಿ ಶಾಮಕ ದಳದವರು ಹಾಗೂ ಆ್ಯಂಬುಲೆನ್ಸ್​ ತಕ್ಷಣವೇ ಸ್ಥಳಕ್ಕೆ ಬಂದು ಸೇರಿದೆ. ಎಲ್ಲರೂ ಸೇರಿ ಹರಸಾಹಸ ಮಾಡಿ ಮಹಿಳೆಯ ದೇಹವನ್ನು ಮೇಲೆತ್ತಿದ್ದಾರೆ. ಆದರೆ ದೇಹ ಮೇಲೆ ಬರುತ್ತಿದ್ದಂತೆಯೇ ತಾವು ಅದೆಷ್ಟು ಮೋಸ ಹೋದೆವೆಂದು ತಲೆ ಚಚ್ಚಿಕೊಂಡಿದ್ದಾರೆ.

ಅಸಲಿಗೆ ಆ ನದಿಯಲ್ಲಿ ತೇಲುತ್ತಿದ್ದದ್ದು ಮಹಿಳೆಯ ದೇಹವಲ್ಲ ಬದಲಾಗಿ ಒಂದು ಸೆಕ್ಸ್​ ಡಾಲ್. ಯಾರೋ ರಬ್ಬರ್​ನಿಂದ ಮಾಡಿರುವ ಹೆಣ್ಣು ಸೆಕ್ಸ್ ಡಾಲ್​ ಅನ್ನು ಬಳಸಿ ನದಿಗೆ ಬಿಸಾಕಿದ್ದಾರೆ. ಅದು ನೋಡುಗರ ಕಣ್ಣಿಗೆ ಹೆಣ್ಣಿನ ದೇಹದಂತೆ ಕಂಡಿದೆ. ಜಪಾನ್ ಒಂದೇ ದೇಶದಲ್ಲಿ ಪ್ರತಿ ವರ್ಷ 2 ಸಾವಿರಕ್ಕೂ ಅಧಿಕ ಸೆಕ್ಸ್ ಡಾಲ್​ಗಳು ಮಾರಾಟವಾಗುತ್ತದೆ. ಅಲ್ಲಿನ ಜನರು ಸೆಕ್ಸ್​ ಡಾಲ್​ಗಳೊಂದಿಗೆ ಅದೆಷ್ಟು ಭಾವನಾತ್ಮಕವಾಗಿ ಸಂಬಂಧ ಬೆಳೆಸಿಕೊಳ್ಳುತ್ತಾರೆಂದರೆ ಅವುಗಳನ್ನು ಅಂತ್ಯಸಂಸ್ಕಾರ ಮಾಡಲೆಂದೇ ಕೆಲ ಸಂಸ್ಥೆಗಳೂ ಹುಟ್ಟಿಕೊಂಡಿವೆಯಂತೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net