TTD ಬಾಲಮಂದಿರಕ್ಕೆ ₹ 50 ಲಕ್ಷ ದೇಣಿಗೆ; 35 ವರ್ಷದ ಉಳಿತಾಯವನ್ನು ದಾನ ನೀಡಿದ ಮಹಿಳೆ

Untitled design - 2025-02-04T141503.307
Published on

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನದ (TTD) ಶ್ರೀವೆಂಕಟೇಶ್ವರ ಸರ್ವ ಶ್ರೇಯಸ್ (ಎಸ್‌ವಿ ಬಾಲಮಂದಿರ) ಟ್ರಸ್ಟ್‌ಗೆ 70 ವರ್ಷದ ಮಹಿಳೆಯೊಬ್ಬರು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತನ್ನ 35 ವರ್ಷಗಳ ಒಟ್ಟು ಉಳಿತಾಯವನ್ನು ದೇಣಿಗೆ ನೀಡಿದ್ದಾರೆ.

ರೇಣಿಗುಂಟದ ಸಿ ಮೋಹನಾ ಅವರು ವಿಶ್ವಸಂಸ್ಥೆ ಸೇರಿದಂತೆ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ ಅರೇಬಿಯಾ ಮತ್ತು ಭಾರತದಲ್ಲಿ ಅಭಿವೃದ್ಧಿ ಮತ್ತು ವಿಪತ್ತು ನಿರ್ವಹಣಾ ವಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವಾಗ ತನ್ನ ಉಳಿತಾಯದ ಹಣವನ್ನು ದಾನ ಮಾಡಿದ್ದಾರೆ.

ಸಿ ಮೋಹನಾ ಅವರು ಕಳೆದ 35 ವರ್ಷಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಉಳಿಸಿದ ಪ್ರತಿಯೊಂದು ಪೈಸೆಯನ್ನು ಟಿಟಿಡಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಅನಾಥ ಮತ್ತು ಬಡಮಕ್ಕಳ ಕಲ್ಯಾಣಕ್ಕಾಗಿ ದಾನ ಮಾಡಿದ್ದಾರೆ ಎಂದು ದೇವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ದೇಣಿಗೆಯ ಮೊತ್ತವನ್ನು ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ತಿರುಮಲದ ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್.​​ವೆಂಕಯ್ಯ ಚೌಧರಿ ಅವರಿಗೆ ಸಲ್ಲಿಸಲಾಗಿದೆ. ತಿರುಪತಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಪಾಲಕತ್ವ ಟಿಟಿಡಿಗೆ ಇದೆ.

ತಿರುಪತಿ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನಿರ್ವಹಿಸುತ್ತದೆ. ಈ ದೇವಾಲಯದ ಒಟ್ಟು ಆಸ್ತಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಒಂದು ಅಂದಾಜಿನ ಪ್ರಕಾರ, ದೇವಾಲಯದ ಒಟ್ಟು ಸಂಪತ್ತು 37,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ ವಾರ್ಷಿಕ ಕಾಣಿಕೆಗಳು ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಈ ದೇವಾಲಯವನ್ನು ಅಧಿಕೃತವಾಗಿ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವೆಂದು ಹೇಳಲಾಗುತ್ತದೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net