More

    ಕುಡಿಯುವ ನೀರಿನ ಟ್ಯಾಂಕ್​ಗೆ ಬಿದ್ದು ಮಹಿಳೆ ಆತ್ಮಹತ್ಯೆ: 3 ದಿನ ಅದೇ ನೀರು ಬಳಸಿದ ಅಪಾರ್ಟ್​ಮೆಂಟ್​​ ನಿವಾಸಿಗಳು!

    ಬೆಂಗಳೂರು: ಅಪಾರ್ಟ್​ಮೆಂಟ್​ನ ಕುಡಿಯುವ ನೀರಿನ ಟ್ಯಾಂಕ್​ಗೆ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕನ್ಯೂ ಟೌನ್​ನ ನಾಲ್ಕನೆ ಹಂತದಲ್ಲಿ ನಡೆದಿದೆ.

    ಗೌರಿ ನಾಗರಾಜ್ ಮೃತ ಮಹಿಳೆ. ಹಣಕಾಸು ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಭಾನುವಾರ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಗಿದೆ.

    ಇದನ್ನೂ ಓದಿ: ಇನ್ಮುಂದೆ ಲಾಕ್​ಡೌನ್​ ಬಗ್ಗೆ ಚರ್ಚಿಸುವುದೇ ಇಲ್ಲ: ಸಿಎಂ ಬಿ.ಎಸ್​.ಯಡಿಯೂರಪ್ಪ

    ಆತಂಕಕಾರಿಯೆಂದರೆ ಕಳೆದ ಮೂರು ದಿನದಿಂದ ಅಪಾರ್ಟ್​ಮೆಂಟ್​ ನಿವಾಸಿಗಳು ಸ್ನಾನಕ್ಕೆ, ಕುಡಿಯುವುದಕ್ಕೆ ಹಾಗೂ ಮನೆ‌ ಕೆಲಸಕ್ಕೆ ಎಲ್ಲದಕ್ಕು ಅದೇ ನೀರು ಬಳಸಿದ್ದರು. ಇದೀಗ ಟ್ಯಾಂಕ್​​ನಲ್ಲಿ ಶವ ಪತ್ತೆಯಾದ ಬೆನ್ನಲ್ಲೆ ಭಯಭೀತಗೊಂಡಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ.

    ಸದ್ಯ ಮೃತ ದೇಹ ಹೊರತೆಗೆದು ಮರಣೊತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಹಿಳೆಗೆ ಕರೊನಾ‌ ಇದ್ಯಾ ಇಲ್ವಾ ಎಂಬುದರ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಘಟನೆಯ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಡೆತ್​ನೋಟ್​ ಪತ್ತೆ
    ಮೃತ ಗೌರಿ ಸುಮಾರು ಹತ್ತು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿದ್ದು, ಜಯಸೂರ್ಯ ಬಿಲ್ಡರ್ಸ್ ಮೇಲೆ ಆರೋಪ‌ ಮಾಡಿದ್ದಾರೆ. ಹಣ ಕೊಡಬೇಕು ಎಂದು ಜಯಸೂರ್ಯ ಬಿಲ್ಡರ್ಸ್​ನ ಮೂರು ಸದಸ್ಯರಾದ ಗೋಪಿ, ಭಾರ್ಗವ್ ಹಾಗೂ ದೇವರಾಜೇಂದ್ರಪ್ಪ ಎಂಬುವರ ವಿರುದ್ಧ ದೂರಿದ್ದಾರೆ. ಮೃತ ಗೌರಿನಾಗರಾಜ್ ಸೈಟ್ ಕೊಡಿಸುವ ವ್ಯವಹಾರ ಮಾಡುತ್ತಿದ್ದರು. ಸದ್ಯ ಮಹಿಳೆಯ ಡೆತ್ ನೋಟ್ ಆಧಾರದ ಮೇಲೆ ಜಯಸೂರ್ಯ ಬಿಲ್ಡರ್ಸ್​ನ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಒಂಟಿತನಕ್ಕೆ ಬೈ ಬೈ ಹೇಳಿದ್ರು ಹಾಟ್​ ಬೆಡಗಿ ಪೂನಂ ಪಾಂಡೆ; ಬಹುಕಾಲದ ಗೆಳೆಯನ ಜತೆ ಎಂಗೇಜ್ಡ್..

    ಈ ಸ್ಥಳಕ್ಕೆ ಹೋಗಲು ಹೆದರುತ್ತಿರುವ ಗ್ರಾಮಸ್ಥರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts