ಪತಿಯ ಗುಪ್ತಾಂಗವನ್ನು ಕೊಡಲಿಯಿಂದ ಕತ್ತರಿಸಿ ಮುಗಿಸಿದ 5ನೇ ಹೆಂಡತಿ ಅರೆಸ್ಟ್

Crime Symbolic
Published on

ಮಧ್ಯಪ್ರದೇಶ: ಐದು ಮದ್ವೆಯಾದ ವ್ಯಕ್ತಿಯನ್ನು ಆತನ 5ನೇ ಹೆಂಡ್ತಿ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಂದು ಪೊಲೀಸರ ಅತಿಥಿಯಾಗಿದ್ದಾಳೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಿಂಗ್ರೂಲಿಯಲ್ಲಿ ನಡೆದಿದೆ.

ಬಿರೇಂದರ್ ಗುರ್ಜರ್ ಮೃತ ವ್ಯಕ್ತಿ. ಐದು ಮದ್ವೆಯಾಗಿದ್ದ ಈತನನ್ನು  5ನೇ ಪತ್ನಿ ಕಾಂಚನಾ ಗುರ್ಜರ್ ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದಲ್ಲದೇ ಆತನ ದೇಹವನ್ನು ದೂರ ಎಸೆದಿದ್ದಾಳೆ.

ಇತ್ತ ಮೃತ ಬಿರೇಂದ್ರನ ಪತ್ನಿ ಕಾಂಚನಾ ತನ್ನ ಗಂಡನ ಹತ್ಯೆ ಕುರಿತಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಳು. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.

ನನ್ನ ಗಂಡ ಮಾದಕ ವ್ಯಸನಿ ಆಗಿದ್ದು, ದಿನವೂ ಕುಡಿದು ಬಂದು ತೀವ್ರವಾಗಿ ಕಿರುಕುಳ ನೀಡುತ್ತಿದ್ದ. ಫೆಬ್ರವರಿ 21 ರಂದು ರಾತ್ರಿ 20 ನಿದ್ರೆ ಮಾತ್ರೆಗಳನ್ನು ಗಂಡನಿಗೆ ಆಹಾರದಲ್ಲಿ ಬೆರೆಸಿದ್ದೆ. ಕೊಲೆಗೂ ಮೊದಲು ಕೊಡಲಿಯಿಂದ ಗಂಡನ ಮೇಲೆ ಹಲವು ಬಾರಿ ಹೊಡೆದು ಹಲ್ಲೆ ಮಾಡಿದೆ. ಕೊನೆಯದಾಗಿ ಆತನ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹತ್ಯೆ ಮಾಡಿದ್ದೇನೆಂದು ಆರೋಪಿ ಕಾಂಚನಾ ಯಾದವ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

ಕೊಲೆಯ ಬಳಿಕ ಕಾಂಚನಾ ಗಂಡನ ಮೃತದೇಹವನ್ನು ಬಟ್ಟೆಯಿಂದ ಸುತ್ತಿ ರಸ್ತೆ ಬದಿ ಎಸೆದು ಬಂದಿದ್ದಾಳೆ. ಅಲ್ಲದೇ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಕೊಲೆಯಾದ ಗಂಡನ ಬಟ್ಟೆ ಚಪ್ಪಲಿಗಳನ್ನು ಸುಟ್ಟು ಹಾಕಿದ್ದಾಳೆ . ವಿಚಾರಣೆಯ ನಂತರ ಪೊಲೀಸರು ಕೊಲೆಗಾತಿ ಪತ್ನಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net