ಸಣ್ಣ ಮಕ್ಕಳನ್ನು ಅಪಹರಿಸಲು ಯತ್ನಿಸಿದ ಆರೋಪಿ ಮಹಿಳೆ ಸೆರೆ!

WhatsApp Image 2023-04-19 at 8.19.11 AM
Published on

ರಾಮನಗರ: ಸಣ್ಣ ಮಕ್ಕಳನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾದ ಆರೋಪಿಯನ್ನು ರಾಮನಗರದಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ದಿವ್ಯಾ ರಶ್ಮಿ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳಿಂದ ಮಕ್ಕಳಿಲ್ಲದೇ ಕೊರಗುತ್ತಿದ್ದ ದಿವ್ಯಾ, ಗಂಡನನ್ನು ಸಹ ಕಳೆದುಕೊಂಡಪ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಆರೋಪಿ ದಿವ್ಯಾ ಜತೆ ಸುನೀಲ್ ಎಂಬಾತನ ಕೈವಾಡದ ಶಂಕೆಯೂ ವ್ಯಕ್ತವಾಗಿದೆ. ಮಕ್ಕಳಿಲ್ಲದ ಕಾರಣ ದಿವ್ಯಾ ಮಕ್ಕಳನ್ನು ಕದಿಯಲು ಪ್ಲ್ಯಾನ್ ಮಾಡುತ್ತಿದ್ದರು ಎನ್ನಲಾಗಿದ್ದು ಮಗು ಪೋಷಕರಿಂದ ವಿವಿ ಪುರಂ ಠಾಣೆಗೆ ದೂರು ಬಂದಿತ್ತು.

ಈ ಹಿನ್ನೆಲೆ ಪೊಲೀಸರೂ ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಕಡೆಗೆ ಪೊಲೀಸರು ನೂರಾರು ಸಿಸಿಟಿವಿ ಆಧರಿಸಿ ಮಹಿಳೆಯನ್ನು ಸೆರೆ ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net