ದುಬೈ: ಪಾಕಿಸ್ತಾನ ಹಾಗೂ ದುಬೈನಲ್ಲಿ ಹೈಬ್ರಿಡ್ ಮಾದರಿಯಲ್ಲಿ ೆ.19ರಂದು ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯ ಬಹುಮಾನ ಮೊತ್ತವನ್ನು ಐಸಿಸಿ ಶುಕ್ರವಾರ ೋಷಣೆ ಮಾಡಿದೆ. ಟೂರ್ನಿಯ ಪ್ರಶಸ್ತಿ ವಿಜೇತರು ₹19.45 ಕೋಟಿ ಪಡೆಯಲಿದ್ದು, ರನ್ನರ್ ಅಪ್ ತಂಡ 9.72 ಕೋಟಿ ರೂಪಾಯಿ ನಗದು ಬಹುಮಾನ ಜೇಬಿಗಿಳಿಸಿಕೊಳ್ಳಲಿದ್ದಾರೆ. 2017ರ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಶೇ.53 ಏರಿಕೆ ಮಾಡಲಾಗಿದ್ದು, ಒಟ್ಟು ಬಹುಮಾನದ ಮೊತ್ತ 6.9 ದಶಲಕ್ಷ ಡಾಲರ್ ಅಂದರೆ, 60 ಕೋಟಿ ರೂಪಾಯಿಗೆ ತಲುಪಿದೆ.
1996ರ ನಂತರ ಪಾಕ್ ಆತಿಥ್ಯದಲ್ಲಿ ನಡೆಯುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದ್ದು, ಭದ್ರತಾ ಭೀತಿಯಿಂದಾಗಿ ಭಾರತ ಮಾತ್ರ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ೈನಲ್‌ಗೇರಿದ ಎರಡು ತಂಡಗಳ ಜತೆಗೆ ಸೆಮಿೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸುವ 2 ತಂಡಗಳು ತಲಾ ₹4.86 ಕೋಟಿ ತನ್ನದಾಗಿಸಿಕೊಳ್ಳಲಿವೆ. ಎಂಟು ತಂಡಗಳು ಲೀಗ್ ಗುಂಪು ಹಂತದ ಪ್ರತಿ ಗೆಲುವಿಗೆ 30 ಲಕ್ಷ ರೂಪಾಯಿಗಳನ್ನು ಗಿಟ್ಟಿಸಿಕೊಳ್ಳಲಿದ್ದು, ಟೂರ್ನಿಯ ಕೊನೆಯಲ್ಲಿ ಐದು ಹಾಗೂ ಆರನೇ ಸ್ಥಾನ ಪಡೆದ ತಂಡಗಳು ತಲಾ 3 ಕೋಟಿ ರೂಪಾಯಿ ಹಾಗೂ ಏಳು, ಎಂಟನೇ ಸ್ಥಾನ ಹೊಂದಿರುವ ತಂಡಗಳು ತಲಾ 1.2 ಕೋಟಿ ರೂಪಾಯಿ ಗಳಿಸಲಿವೆ. ಇದರ ಜತೆಗೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಎಂಟು ತಂಡಗಳು ಹೆಚ್ಚುವರಿಯಾಗಿ ₹1.08 ಕೋಟಿ ಬಹುಮಾನ ಮೊತ್ತದ ಗ್ಯಾರಂಟಿ ಹೊಂದಿವೆ.
2025ರ ಆವೃತ್ತಿಯಲ್ಲಿನ ಎಂಟು ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಜತೆಗೆ ದುಬೈ (ಭಾರತ ಪಂದ್ಯಗಳ ಜತೆಗೆ, ಭಾರತ ೈನಲ್ ತಲುಪಿದರೆ) ಕ್ರೀಡಾಂಗಣದಲ್ಲಿ ಪಂದ್ಯಗಳು ನಿಗದಿಯಾಗಿವೆ.
1998ರಲ್ಲಿ ಮೊದಲ ಬಾರಿ ಆರಂಭಗೊಂಡ ಟೂರ್ನಿಯನ್ನು 2 ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿತು, ಬಳಿಕ 2009ರಿಂದ 2017ರವರೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗಿತ್ತು. 2017ರ ಆವೃತ್ತಿಯ ಬಳಿಕ ಕೋವಿಡ್‌ನಿಂದಾಗಿ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿತ್ತು. ಟಿ20 ಸ್ವರೂಪದಲ್ಲಿ ಮಹಿಳಾ ಚಾಂಪಿಯನ್ಸ್ ಟ್ರೋಫಿಯ ಮೊದಲ ಆವೃತ್ತಿ 2027ರಲ್ಲಿ ನಡೆಯಲಿದೆ.