ಭಾರತದಲ್ಲಿ ಮತ್ತೆ ಟಿಕ್​ ಟಾಕ್ ಆ್ಯಕ್ಟಿವ್ ಆಗುತ್ತಾ?; ಲಿಂಕ್ಡ್ ಇನ್​ನಲ್ಲಿ ಉದ್ಯೋಗದ ಬಗ್ಗೆ ಪೋಸ್ಟ್ ಹಾಕಿದ ಟಿಕ್​ ಟಾಕ್​ ಮಾತೃ ಕಂಪನಿ | Tik Tok

Tik Tok 1
Published on

Tik Tok: 2021ರಲ್ಲಿ ಕಾಶ್ಮೀರದ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಉಂಟಾದಾ ಹಿನ್ನೆಲೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಟಿಕ್‌ಟಾಕ್ ಆ್ಯಪ್​ ಅನ್ನು ನಿಷೇಧ ಮಾಡಿತ್ತು. ಅಂದಿನಿಂದ, ಭಾರತದಲ್ಲಿ ಟಿಕ್‌ಟಾಕ್‌ನ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿವೆ. ಆದ್ಯಾಗ್ಯೂ ಈಗ ಮತ್ತೆ ಭಾರತ-ಚೀನಾ ನಡುವೆ ಸ್ನೇಹ ಏರ್ಪಟ್ಟಿದ್ದು, ಮತ್ತೆ ಟಿಕ್​ ಟಾಕ್ ಆ್ಯಕ್ಟಿವ್ ಆಗುತ್ತಾ? ಎಂಬ ಚರ್ಚೆ ನಡೆದಿದೆ.

ಅಮರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಸುಂಕ ನೀತಿಯಿಂದಾಗಿ ಏಳು ವರ್ಷಗಳ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿದರು.ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಎರಡೂ ದೇಶಗಳು ಸೌಹಾರ್ದಯುತವಾಗಿ ಅಭಿವೃದ್ಧಿ ಹೊಂದಬೇಕೆಂದು ನಿರ್ಧರಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಪ್ರಸ್ತುತ ಎರಡೂ ದೇಶಗಳು ರಾಜಿ ಮಾಡಿಕೊಂಡ ಹಿನ್ನೆಲೆ ಟಿಕ್‌ಟಾಕ್ ಭಾರತದಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸುತ್ತದೆ ಎಂದು ಚರ್ಚೆ ಆರಂಭವಾಗಿದೆ. ಅದರಂತೆ, ಟಿಕ್‌ಟಾಕ್‌ನ ಮಾತೃ ಕಂಪನಿ ಬೈಟ್‌ಡ್ಯಾನ್ಸ್ ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಾವಕಾಶದ ಅಧಿಸೂಚನೆಯನ್ನು ಪೋಸ್ಟ್ ಮಾಡಿದೆ. ಗುರುಗ್ರಾಮ್‌ನಲ್ಲಿರುವ ತನ್ನ ಕಚೇರಿಯಲ್ಲಿ ಎರಡು ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಘೋಷಿಸಿದೆ. ಇದರೊಂದಿಗೆ, ಭಾರತದಲ್ಲಿ ಟಿಕ್‌ಟಾಕ್ ಸೇವೆಗಳು ಮತ್ತೆ ಆರಂಭವಾಗುತ್ತವೆಯೇ ಎಂದು ಹಲವರು ಚರ್ಚಿಸುತ್ತಿದ್ದಾರೆ.

ಇತ್ತೀಚೆಗೆ ನಮ್ಮ ದೇಶದ ಅನೇಕ ಜನರು ಟಿಕ್‌ಟಾಕ್ ವೆಬ್‌ಸೈಟ್‌ಗೆ ಪ್ರವೇಶಿಸಲು ಸಾಧ್ಯವಾಗಿದೆ. ಆದಾಗ್ಯೂ, ಲಾಗಿನ್ ಆಗಲು ಮತ್ತು ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಿಲ್ಲ. ಟಿಕ್‌ಟಾಕ್ ಮೇಲಿನ ನಿಷೇಧ ಇನ್ನೂ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net