

ಬೆಂಗಳೂರು: 1978ರಲ್ಲಿ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿ ಮತ್ತೆ ಪ್ರಧಾನಿಯಾಗಲು ಅವಕಾಶ ಮಾಡಿಕೊಟ್ಟ ಕ್ಷೇತ್ರ ಚಿಕ್ಕಮಗಳೂರು. ಇಂದಿರಾ ಗಾಂಧಿ ಸ್ಪರ್ಧಿಸಿ ಗೆದ್ದ ಕಾರಣಕ್ಕೆ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ದೇಶ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಈ ರೋಚಕ ಕಥೆ ಸಿನಿಮಾರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ಸಣ್ಣ ಸುಳಿವು ನೀಡಿದ್ದ ನಿರ್ದೇಶಕ ರಘು ಕೋವಿ, ಸದ್ಯ ಲಾಕ್ಡೌನ್ ಹೊತ್ತಲ್ಲಿ ಇಂದಿರಾ ಗಾಂಧಿ ಕುರಿತ ಸಿನಿಮಾ ಮೇಲೆಯೇ ಜಾಸ್ತಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ, ಈ ಬಹುಭಾಷಾ ಸಿನಿಮಾಗೆ ಬಾಲಿವುಡ್ ನಟಿ ರವೀನಾ ಟಂಡನ್ ಅವರನ್ನು ಕರೆತರುವ ಲೆಕ್ಕಾಚಾರದಲ್ಲಿದ್ದಾರೆ ನಿರ್ದೇಶಕರು.
ಹೌದು, ಪ್ಯಾನ್ ಇಂಡಿಯಾ ಲೆವೆಲ್ಗೆ ಈ ಸಿನಿಮಾ ನಿಮಾಣ ಮಾಡುವ ಉದ್ದೇಶ ಹೊಂದಿದ್ದು, ಬಹುಭಾಷೆಗಳಲ್ಲಿ ತೆರೆಗೆ ತರುವ ಪ್ಲ್ಯಾನ್ ನಡೆಯುತ್ತಿದೆ. ಇಡೀ ಸಿನಿಮಾ 70ರ ಕಾಲಘಟ್ಟದಲ್ಲಿ ನಡೆಯಲಿದ್ದು, ಅದಕ್ಕೆ ಹೋಲಿಕೆ ಆಗುವ ರೀತಿಯಲ್ಲಿಯೇ ಸೆಟ್ಗಳನ್ನೂ ನಿಮಾಣ ಮಾಡಲಾಗುವುದಂತೆ. ಈ ಬಗ್ಗೆ ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ‘ಎಲ್ಲ ಅಂದುಕೊಂಡಂತೆ ಆಗಿದ್ದರೆ, ನವೆಂಬರ್ನಲ್ಲಿ ಈ ಸಿನಿಮಾ ಶುರುವಾಗಬೇಕಿತ್ತು. ಆದರೆ, ಅದಕ್ಕೂ ಮುನ್ನ ಸೂರಜ್ ಕುಮಾರ್, ಪ್ರಿಯಾ ವಾರಿಯರ್ ಸಿನಿಮಾ ಮಾಡಬೇಕಿತ್ತು. ಸದ್ಯಕ್ಕೆ ಲಾಕ್ಡೌನ್ನಿಂದ ಆ ಸಿನಿಮಾ ನಿಂತಿದೆ. ಅಕೊ್ಟೕಬರ್ನಲ್ಲಿ ಶೂಟಿಂಗ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎನ್ನಲಾಗುತ್ತಿದೆ. ಹಾಗಾಗಿ ಇಂದಿರಾ ಗಾಂಧಿ ಚಿತ್ರದ ಕಥೆ ಶುರುಮಾಡಿದ್ದೇನೆ. ದಕ್ಷಿಣ ಭಾರತದ ದೊಡ್ಡ ನಿಮಾಪಕರೊಬ್ಬರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಆರ್ಜಿವಿ ಟೀಮ್ಂದಲೂ ಕಥೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅವರೂ ನಿಮಾಣದಲ್ಲಿ ಸಾಥ್ ನೀಡುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡುತ್ತಾರೆ ರಘು ಕೋವಿ. ಥ್ರಿಲ್ಲರ್ ಶೈಲಿಯಲ್ಲಿ ಸಾಗುವ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರ ನಿಭಾಯಿಸಲಿದ್ದು, ಪಾತ್ರ ವರ್ಗವನ್ನು ಮುಂದಿನ ದಿನಗಳಲ್ಲಿ ಅಂತಿಮ ಮಾಡಲಿ ದ್ದಾರಂತೆ. ಇನ್ನುಳಿದಂತೆ ಈಗಾಗಲೇ ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ಆಗಿನ ಚುನಾವಣೆ ಸಮಯದ ರೋಚಕತೆಯನ್ನು ಪ್ರೊ. ಮುಕುಂದರಾಜ್, ಚಂದ್ರಶೇಖರ ಕಂಬಾರ ಸೇರಿ ಹಲವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ನಿರ್ದೇಶಕರು.
ಇಂದಿರಾ ಗಾಂಧಿ ಕುರಿತ ಸಿನಿಮಾ ಎಂದರೆ ಸಹಜವಾಗಿ ಕಾಂಟ್ರವರ್ಸಿ ಎಂದು ಭಾವಿಸುತ್ತಾರೆ. ಆದರೆ, ಅದನ್ನು ನಾವಿಲ್ಲಿ ಸಿನಿಮ್ಯಾಟಿಕ್ ಶೈಲಿಯಲ್ಲಿ ಹೇಳಲಿದ್ದೇವೆ. ಉಪ ಚುನಾವಣೆ ಯಿಂದ ಅವರ ಸಾವಿನವರೆಗೂ ಈ ಸಿನಿಮಾ ಸಾಗಲಿದ್ದು, ರವೀನಾ ಟಂಡನ್ ಅವರನ್ನು ಕರೆತರುವ ಯೋಚನೆ ಇದೆ. | ರಘು ಕೋವಿ, ನಿರ್ದೇಶಕ