ಒಬ್ಬ 16 ಜನರನ್ನು ಡಿಫೆಂಡ್ ಮಾಡ್ತಾನೆ, ನನ್ನನ್ನು ಹೊರಗೆ ಕಳಿಸೋದು ಬೆಸ್ಟ್; BiggBoss ತೊರೆಯುತ್ತಾರಾ ಲಾಯರ್​ ಜಗದೀಶ್​

Lawyer Jagadish
Published on

ಬೆಂಗಳೂರು: 11ನೇ ಆವೃತ್ತಿಯ ಬಿಗ್​ಬಾಸ್ (BiggBoss)​ ಶುರುವಾಗಿ ಈಗಾಗಲೇ ಮೂರು ಸಂಚಿಕೆಗಳು ಪ್ರಸಾರಗೊಂಡಿದ್ದು, ಈ ಬಾರಿ ಸ್ವರ್ಗ-ನರಕ ಎಂಬ ಥೀಮ್​ನಲ್ಲಿ ಕಾರ್ಯಕ್ರಮವನ್ನು ರೂಪುಗೊಳಿಸಲಾಗಿದೆ. ಅದರಂತೆ ಸ್ವರ್ಗದಲ್ಲಿರುವ ಸ್ಫರ್ಧಿಗಳಿಗೆ ಸಿಗುವಷ್ಟು ಸೌಲಭ್ಯ ನರದಲ್ಲಿರುವವರಿಗೆ ಸಿಗುವುದಿಲ್ಲ. ಈ ವಿಚಾರವಾಗಿ ಸ್ಫರ್ಧಿಗಳ ನಡುವೆ ಜಗಳವಾಗುತ್ತಿದ್ದು, ಇದೀಗ ಲಾಯರ್​ ಜಗದೀಶ್​ ಬಿಗ್​ಬಾಸ್​ ಕಾರ್ಯಕ್ರಮದ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಹೊರಬಂದಮೇಲೆ ಕಾರ್ಯಕ್ರಮವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.

ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಲಕ್ಷುರಿ ಐಟಂಗಳನ್ನು ನೀಡಲಾಗಿತ್ತು. ನಿಯಮದ ಪ್ರಕಾರ ಇದನ್ನು ನರಕದಲ್ಲಿರುವವರಿಗೆ ಕೊಡಬಾರದು ಎಂದು ಹೇಳಲಾಗಿತ್ತು. ಇದರ ಹೊರತಾಗಿಯೂ ಜಗದೀಶ್​ ನರಕದಲ್ಲಿರುವವರಿಗೆ ನಿಯಮ ಉಲ್ಲಂಘಿಸಿ ಕೆಲವು ವಸ್ತುಗಳನ್ನು ನೀಡಿದ್ದಾರೆ. ಇದನ್ನು ನೋಡಿದ ಬಿಗ್​ಬಾಸ್​ ಮನೆಯಲ್ಲಿದ ದಿನಸಿ ಸಾಮಗ್ರಿ, ಹಣ್ಣು-ಹಂಪಲುಗಳನ್ನು ಹಿಂದಿರುಗಿಸಿ ಕೊಡುವಂತೆ ಆದೇಶ ಕೊಟ್ಟಿದ್ದರು. ಎಲ್ಲರೂ ಮೊದಲಿಗೆ ಜಗದೀಶ್​ ಅವರು ಬಿಸಿನೀರು ಕೊಟ್ಟ ಕಾರಣದಿಂದ ಈಗಾಯ್ತು ಎಂದು ಭಾವಿಸಿದ್ದರು. ಆದರೆ, ಅಲ್ಲಿ ಬೇರೆಯೇ ನಡೆದಿತ್ತು. ಈ ವಿಚಾರವಾಗಿ ಸ್ಫರ್ಧಿಗಳು ಜಗದೀಶ್​ ಅವರಿಗೆ ಛೀಮಾರಿ ಹಾಕಿದ್ದರು.

ಇದೀಗ ವಕೀಲ ಜಗದೀಶ್ (Lawyer Jagadish)​ ಬಿಗ್​ಬಾಸ್ (BiggBoss)​ ತೊರೆಯುವ ನಿರ್ಧಾರಕ್ಕೆ ಬಂದಿದ್ದು, ಮನೆಯಿಂದ ಹೊರಬಂದ ಬಳಿಕ ಕಾರ್ಯಕ್ರಮವನ್ನು ಬಂದ್​ ಮಾಡಿಸುವುದಾಗಿ ಕ್ಯಾಮರಾ ಮುಂದೆಯೇ ಹೇಳಿದ್ದಾರೆ. ಈ ಬಗ್ಗೆ ಕಾರಣವನ್ನು ಉಲ್ಲೇಖಿಸಿರುವ ಜಗದೀಶ್​ ಬಿಗ್​ಬಾಸ್​ ನಡೆಯನ್ನು ಖಂಡಿಸಿದ್ದಾರೆ. ಟಾಸ್ಕ್ ಮುಗಿದ ಬಳಿಕ ಈ ರೀತಿ ಕೆಲಸ ಮಾಡಿಸೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಮುಖವಾಡ ಹಾಕ್ಕೊಂಡು ಜೀವನ ಮಾಡ್ತಿದ್ದಾರೆ. ಒಬ್ಬ 16 ಜನರನ್ನು ಡಿಫೆಂಡ್ ಮಾಡ್ತಾನೆ. ಮೀಸೆ ಇಟ್ಟೋನು ಯಾರೇ ಇರ್ಬೋದು, ಇದುವರೆಗೆ ಬಿಟ್ಟಿಲ್ಲ. ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗಿಯೇ ಇದೆ. ನನಗೆ ನಾನೇ ಬಿಗ್​ಬಾಸ್. ನನ್ನನ್ನು ಹೊರಗೆ ಕಳಿಸೋದು ಬೆಸ್ಟ್ ಎಂದು ಹೇಳಿ ಹೊರನಡೆದಿದ್ದಾರೆ.

ಲಾಯರ್ ಜಗದೀಶ್ ಅವರು ಸಿಟ್ಟಾಗಿ ಜೋರಾದ ಧ್ವನಿಯಲ್ಲಿ ಮಾತನಾಡುವುದನ್ನು ಈ ಪ್ರೋಮೋದಲ್ಲಿ ಕಾಣಬಹುದು. ಅಂತೂ ಇಂತೂ ಇಂದಿನ ಎಪಿಸೋಡ್ ಸಖತ್ ಆಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ನಿನ್ನೆಯ ಸಂಚಿಕೆಯಲ್ಲಿ ಸ್ಫರ್ಧಿಗಳ ನಡುವೆ ಮಾತಿನ ಚಕಮಕಿಯಾದಾಗಲೂ ಜಗದೀಶ್​ ಬಿಗ್​ಬಾಸ್​ ಪ್ರೋಗ್ರಾಂಅನ್ನು ನಿಲ್ಲಿಸುವುದಾಗಿ ಹೇಳಿ ಹೊಸ ವಿವಾದವನ್ನೇ ಹುಟ್ಟುಹಾಕಿದ್ದಾರೆ. ಈ ಪ್ರೋಮೋ ಸಖತ್​ ವೈರಲ್​ ಆಗಿದ್ದು, ಮುಂದೇನಾಗುತ್ತದೆ ಎಂದು ಕಾದು ನೊಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net